ಎ.ಕೆ. ಟ್ರೇಡರ್ಸ್ ಮಾಲಕ ಮುಹಮ್ಮದ್ ಇಕ್ಬಾಲ್ ನಿಧನ
Update: 2020-02-03 23:47 IST
ಮಂಗಳೂರು : ಬಂದರ್ ನ ಎ.ಕೆ. ಟ್ರೇಡರ್ಸ್ ಮಾಲಕ ಯು.ಟಿ. ಮುಹಮ್ಮದ್ ಇಕ್ಬಾಲ್ ಅಲ್ಪ ಕಾಲದ ಆಸೌಖ್ಯದಿಂದ ಸೋಮವಾರ ನಿಧನರಾದರು.
ಮೃತರು ಪತ್ನಿ, ನಾಲ್ವರು ಪುತ್ರರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಮಯ್ಯತ್ ನಮಾಝ್ ಮತ್ತು ದಫನ ಕಾರ್ಯ ಉಳ್ಳಾಲ ಮೇಲಂಗಡಿ ಹೊಸ ಮಸೀದಿಯಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.