ಉಪ್ಪಿನಂಗಡಿ ಸಿಎ ಬ್ಯಾಂಕ್ ಚುನಾವಣೆ: 8 ಮಂದಿ ಅವಿರೋಧ ಆಯ್ಕೆ
ಉಪ್ಪಿನಂಗಡಿ : ಸಹಕಾರಿ ವ್ಯವಸಾಯಿಕ ಸಂಘ ಉಪ್ಪಿನಂಗಡಿ ಇದರ ಆಡಳಿತ ಮಂಡಳಿ ನಿರ್ದೇಶಕರ 12 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಎಂಟು ಮಂದಿ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಸಾಲಗಾರ ಕ್ಷೇತ್ರದ 4 ಸಾಮಾನ್ಯ ಸ್ಥಾನಕ್ಕಾಗಿ ಫೆ.9ರಂದು ಚುನಾವಣೆ ನಡೆಯಲಿದ್ದು, ನಾಲ್ವರು ಸಹಕಾರ ಭಾರತಿಯ ಅಭ್ಯರ್ಥಿಗಳು ಹಾಗೂ ಓರ್ವ ಸ್ವತಂತ್ರ್ಯ ಅಭ್ಯರ್ಥಿ ಕಣದಲ್ಲಿದ್ದಾರೆ.
ಆಡಳಿತ ಮಂಡಳಿ ನಿರ್ದೇಶಕರ 12 ಸ್ಥಾನಕ್ಕಾಗಿ 24 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇವರಲ್ಲಿ ಸಹಕಾರ ಒಕ್ಕೂಟದ 11 ಮಂದಿ ನಾಮಪತ್ರ ಹಿಂಪಡೆದುಕೊಂಡಿದ್ದಾರೆ.
ಅವಿರೋಧವಾಗಿ ಆಯ್ಕೆಗೊಂಡವರು: ಸಾಲಗಾರ ಮತಕ್ಷೇತ್ರದಲ್ಲಿ ರಾಮ ನಾಯ್ಕ (ಪರಿಶಿಷ್ಟ ಪಂಗಡ ಮೀಸಲು ಸ್ಥಾನ), ಕುಂಞ ಎನ್. (ಪರಿಶಿಷ್ಟ ಜಾತಿ ಮೀಸಲು ಸ್ಥಾನ), ದಯಾನಂದ ಎಸ್. (ಸಾಲಗಾರ ಹಿಂದುಳಿದ ಪ್ರವರ್ಗ ಬಿ), ಶ್ಯಾಮಲಾ ಶೆಣೈ ಎನ್. ( ಮಹಿಳಾ ಮೀಸಲು ಸ್ಥಾನ), ಸುಜಾತ ರೈ (ಮಹಿಳಾ ಮೀಸಲು ಸ್ಥಾನ), ಯತೀಶ್ ಶೆಟ್ಟಿ ಯು. (ಠೇವಣಿದಾರ ಸದಸ್ಯರ ಸ್ಥಾನ), ಸುನೀಲ್ ಕುಮಾರ್ ಎ. (ಸಾಲಗಾರ ಹಿಂದುಳಿದ ಪ್ರವರ್ಗ ಎ) ಹಾಗೂ ಸಾಲಗಾರರಲ್ಲದ ಕ್ಷೇತ್ರದಲ್ಲಿ ಸಚಿನ್ ಎಂ. ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ನಾಮಪತ್ರ ಹಿಂಪಡೆದವರು: ಸಾಲಗಾರರಲ್ಲದ ಕ್ಷೇತ್ರದ ಅಸ್ಕರ್ ಅಲಿ, ಸಾಲಗಾರ ಕ್ಷೇತ್ರದ ರಾಮಪ್ಪ ಪೂಜಾರಿ (ಸಾಮಾನ್ಯ), ಪ್ರಸನ್ನ ಕುಮಾರಿ (ಮಹಿಳಾ ಮೀಸಲು), ರೋನಾಲ್ಡ್ ಪಿಂಟೋ (ಸಾಲಗಾರ ಹಿಂದುಳಿದ ಪ್ರವರ್ಗ ಬಿ ಮೀಸಲು ಸ್ಥಾನ), ಈಸುಬು ಯು.ಕೆ. (ಸಾಮಾನ್ಯ), ನಾರಾಯಣ (ಪರಿಶಿಷ್ಟ ಪಂಗಡ ಮೀಸಲು ಸ್ಥಾನ), ಪ್ರೆಸಿಲ್ಲಾ ಡಿಸೋಜ (ಮಹಿಳಾ ಮೀಸಲು), ವೆಂಕಪ್ಪ ಪೂಜಾರಿ (ಹಿಂದುಳಿದ ಪ್ರವರ್ಗ ಎ ಮೀಸಲು ಸ್ಥಾನ), ಪ್ರಕಾಶ್ ರೈ ಬಿ. (ಸಾಮಾನ್ಯ), ರೂಪೇಶ್ ರೈ (ಸಾಮಾನ್ಯ) ಹಾಗೂ ಎನ್. ಗೋಪಾಲ ನಾಯಕ್ (ಹಿಂದುಳಿದ ವರ್ಗ ಎ) ನಾಮಪತ್ರ ಹಿಂದೆಗೆದುಕೊಂಡಿದ್ದಾರೆ.
ಅಂತಿಮ ಕಣದಲ್ಲಿ: ಸಾಲಗಾರ ಮತಕ್ಷೇತ್ರದ 4 ಸ್ಥಾನಕ್ಕಾಗಿ ಸಹಕಾರ ಭಾರತಿಯ ಜಗದೀಶ್ ರಾವ್ ಎಂ., ಯಶವಂತ ಜಿ., ರಾಜೇಶ್, ಕೆ.ವಿ. ಪ್ರಸಾದ್ ಹಾಗೂ ಸ್ವತಂತ್ರ್ಯವಾಗಿ ಸ್ಪರ್ಧಿಸಿದ್ದ ಅಭ್ಯರ್ಥಿ ಚಂದ್ರಪ್ರಕಾಶ್ ಎನ್. ಅಂತಿಮ ಕಣದಲ್ಲಿದ್ದಾರೆ. ಇವರ ಆಯ್ಕೆಗಾಗಿ ಫೆ.9ರಂದು ಉಪ್ಪಿನಂಗಡಿಯ ದ.ಕ. ಜಿಲ್ಲಾ ಪಂಚಾಯತ್ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆ ನಡೆಯಲಿದೆ.