ಅಂಡರ್-19 ವಿಶ್ವಕಪ್: ಪಾಕ್‌ಗೆ ಸೋಲುಣಿಸಿದ ಭಾರತ ಫೈನಲ್‌ಗೆ

Update: 2020-02-04 14:28 GMT

ಜೋಹಾನ್ಸ್‌ಬರ್ಗ್, ಫೆ.4: ಯಶಸ್ವಿ ಜೈಸ್ವಾಲ್(ಔಟಾಗದೆ 105) ಹಾಗೂ ದಿವ್ಯಾಂಶ್ ಸಕ್ಸೇನ(ಔಟಾಗದೆ 59)ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತದ ಅಂಡರ್-19 ತಂಡ ಪಾಕಿಸ್ತಾನ ವಿರುದ್ಧ 10 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿತು. ಈ ಗೆಲುವಿನ ಮೂಲಕ ಅಂಡರ್-19 ವಿಶ್ವಕಪ್‌ನಲ್ಲಿ ಫೈನಲ್ ತಲುಪಿತು.

ಇಲ್ಲಿ ಮಂಗಳವಾರ ನಡೆದ ಅಂಡರ್-19 ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ಟಾಸ್ ಜಯಿಸಿದ ಪಾಕ್ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಸುಶಾಂತ್ ಮಿಶ್ರಾ(3-28)ನೇತೃತ್ವದ ಬೌಲಿಂಗ್ ದಾಳಿಯ ಸಹಾಯದಿಂದ ಭಾರತ ತಂಡ ಪಾಕ್ ತಂಡವನ್ನು 43.1 ಓವರ್‌ಗಳಲ್ಲಿ 172 ರನ್‌ಗೆ ಆಲೌಟ್ ಮಾಡಿತು. ಪಾಕ್ ಪರವಾಗಿ ಆರಂಭಿಕ ಆಟಗಾರ ಹೈದರ್ ಅಲಿ(56) ಹಾಗೂ ನಾಯಕ ರೊಹೈಲ್‌ ನಝೀರ್(62)ಅರ್ಧಶತಕದ ಕೊಡುಗೆ ನೀಡಿದರು. ಆದರೆ ಉಳಿದ ಆಟಗಾರರು ವಿಫಲರಾದರು.

ವೇಗದ ಬೌಲರ್ ಮಿಶ್ರಾಗೆ ಕಾರ್ತಿಕ್ ತ್ಯಾಗಿ(2-32) ಹಾಗೂ ರವಿ ಬಿಶ್ನೋಯ್(2-46)ತಲಾ ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News