ಸಿದ್ಧಾಪುರ: ಅಂಚೆ ಕಚೇರಿ ಸ್ಥಳಾಂತರ
Update: 2020-02-04 20:19 IST
ಉಡುಪಿ, ಫೆ.4: ಸಿದ್ಧಾಪುರ ಅಂಚೆ ಕಚೇರಿಯನ್ನು ಸೋಮವಾರ ಸಿದ್ಧಾಪುರದ ಮುಖ್ಯರಸ್ತೆಯಲ್ಲಿರುವ ವೆಂಕಟೇಶ್ವರ ಚೇಂಬರ್ಸ್‌ನ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ಉಡುಪಿ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ವಿಲ ಭಟ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕುಂದಾಪುರ ಉತ್ತರ ವಲಯದ ಸಹಾಯಕ ಅಂಚೆ ಅಧೀಕ್ಷಕ ಗಣಪತಿ ಮರ್ಡಿ, ಉಪ ಅಂಚೆಪಾಲಕಿ ಸಾವಿತ್ರಿ, ಉಮಾನಾಥ್, ಸಿದ್ಧಾಪುರ ಅಂಚೆ ಕಚೆೀರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.