ದಕ್ಷಿಣ ಭಾರತ ಮಟ್ಟದ ಕನ್ನಡ ಕಾವ್ಯ ಕಮ್ಮಟ
Update: 2020-02-04 20:20 IST
ಉಡುಪಿ, ಫೆ.4: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕರ್ನಾಟಕ ಹಾಗೂ ಹೊರ ರಾಜ್ಯಗಳ ಕನ್ನಡ ಬರಹಗಾರರಿಗಾಗಿ 2020ರ ಮಾರ್ಚ್‌ನಲ್ಲಿ ಮೂರು ದಿನಗಳ ದಕ್ಷಿಣಭಾರತ ಮಟ್ಟದ ಕನ್ನಡ ಕಾವ್ಯ ಕಮ್ಮಟವನ್ನು ಕಾಸರಗೋಡಿನಲ್ಲಿ ಏರ್ಪಡಿಸಲು ಉದ್ದೇಶಿಸಲಾಗಿದೆ.
ಇದರಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ 20ರಿಂದ 40 ವರ್ಷ ವಯಸ್ಸಿನ ಕನ್ನಡ ಕಾವ್ಯ ರಚನೆಯಲ್ಲಿ ತೊಡಗಿರುವ ದಕ್ಷಿಣ ಭಾರತದ (ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ) ಅ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಫೆ.15 ಕೊನೆಯ ದಿನವಾಗಿದೆ.
ಆಸಕ್ತರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್‌ಸೈಟ್ -http://karnatakasahithyaacademy.org-ನಿಂದ ಅರ್ಜಿ ನಮೂನೆ ಹಾಗೂ ವಿವರಗಳನ್ನು ಪಡೆದುಕೊಳ್ಳಬಹುದು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.