ಕೊಪ್ಪಲಂಡಿ: 3ನೆ ವರ್ಷದ ಮೌಲಿದ್ ಮಜ್ಲಿಸ್

Update: 2020-02-04 15:46 GMT

ಕಾಪು, ಫೆ.4: ಅಬುಲ್ ಅಬ್ಬಾಸ್ ಖಿಳ್ರ್(ಅ.ಸ)ರವರ 3ನೇ ವರುಷದ ಮೌಲಿದ್ ಮಜ್ಲಿಸ್ ಕೊಪ್ಪಲಂಗಡಿ ಲೈಟ್ ಹೌಸ್ ರಸ್ತೆಯ ಸಯ್ಯದ್ ಶಂಸುದ್ದೀನ್ ವಲಿಯುಲ್ಲಾಹ್ ಹಾಗೂ ಸಯ್ಯದ್ ಅಬ್ದುಲ್ ಖಾದಿರ್ ಜಬ್ಬಾರ್ ಮಸ್ತಾನ್ ಉಪ್ಪಾಪ(ಖ.ಸಿ) ವೇದಿಕೆಯಲ್ಲಿ ಇತ್ತೀಚೆಗೆ ಜರಗಿತು.

ಮೌಲೀದ್ ಮಜ್ಲಿಸ್ ನೇತೃತ್ವವನ್ನು ಜಲಾಲುದ್ದೀನ್ ತಂಙಳ್ ಹಾಗೂ ಅಬ್ದುಲ್ ಬಾರಿ ಮುಸ್ಲಿಯಾರ್ ವಹಿಸಿದ್ದರು.

ಈ ಸಂದರ್ಭದಲ್ಲಿ ಆರಂಪಾಡಿ ರಹೀಂ ಉಸ್ತಾದ್, ಶಫೀರ್ ಸಖಾಫಿ, ಸಂಘಟಕರಾದ ಇಸ್ಮಾಯಿಲ್, ಇಮ್ರಾನ್, ಬಶೀರ್, ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News