ವಿಷದ ಹಾವು ಕಚ್ಚಿ ಬಾಲಕ ಮೃತ್ಯು
Update: 2020-02-04 21:23 IST
ಹಿರಿಯಡ್ಕ, ಫೆ.4: ವಿಷದ ಹಾವು ಕಚ್ಚಿದ ಪರಿಣಾಮ ಬಾಲಕನೋರ್ವ ಮೃತ ಪಟ್ಟ ಘಟನೆ ಫೆ.3ರಂದು ಸಂಜೆ 7ಗಂಟೆ ಸುಮಾರಿಗೆ ಪೆರ್ಡೂರು ಗ್ರಾಮದ ಹೆರ್ಡೆ ಎಂಬಲ್ಲಿ ನಡೆದಿದೆ.
ಮೃತನನ್ನು ಹೆರ್ಡೆಯ ಗೀತಾ ಶೆಟ್ಟಿ ಹಾಗೂ ರಾಜು ಶೆಟ್ಟಿ ದಂಪತಿಯ ಮಗ ಅಭಿನವ (9) ಎಂದು ಗುರುತಿಸಲಾಗಿದೆ.
ಶಾಲೆಗೆ ಹೋಗಿ ಸಂಜೆ ಮನೆಗೆ ಬಂದಿದ್ದ ಅಭಿನವ, ಪಕ್ಕದ ಮನೆಗೆ ಹೋಗಿ ವಾಪಾಸ್ಸು ಮನೆಗೆ ಅಂಗಳದಲ್ಲಿ ನಡೆದುಕೊಂಡು ಬರುತ್ತಿದ್ದಾಗ ವಿಷದ ಹಾವು ಕಚ್ಚಿತ್ತೆನ್ನಲಾಗಿದೆ. ಗಂಭೀರ ಸ್ಥಿತಿ ಯಲ್ಲಿದ್ದ ಅಭಿನವ ಮಣಿಪಾಲದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟನು.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ