×
Ad

'ಪ್ರಜಾಭಾರತ' ಯಶಸ್ವಿಗೊಳಿಸಲು ಸುನ್ನೀ ಕೊ-ಆರ್ಡಿನೇಶನ್ ಕರೆ

Update: 2020-02-04 22:14 IST

ಮಂಗಳೂರು : 'ದ್ವೇಶ ಬಿಟ್ಟು ದೇಶ ಕಟ್ಟು' ಎಂಬ ಮುಖ್ಯ ಘೋಷಣೆಯಡಿಯಲ್ಲಿ ಫೆ. 20 ವಿಶ್ವ ಸಾಮಾಜಿಕ ನ್ಯಾಯ ದಿನದಂದು  ಆರಂಭ ಗೊಂಡು ಎ. 14 ರ ಅಂಬೇಡ್ಕರ್ ಜಯಂತಿಯಂದು ಸಮಾರೋಪಗೊಳ್ಳುವ 55 ದಿನಗಳ 'ಪ್ರಜಾಭಾರತ' ಅಭಿಯಾನವನ್ನು ಯಶಸ್ವಿಗೊಳಿಸಲು ಸುನ್ನೀ ಕೊ-ಆರ್ಡಿನೇಶನ್ ಕರೆ ನೀಡಿದೆ.

ಕರ್ನಾಟಕ ಮುಸ್ಲಿಂ ಜಮಾಅತ್ ಇದರ ರಾಜ್ಯ ಸಮಿತಿ ಹಮ್ಮಿಕೊಂಡಿರುವ ಪ್ರಸ್ತುತ ಅಭಿಯಾನ ರಾಜ್ಯಾಧ್ಯಂತ ಎಲ್ಲಾ ಜಿಲ್ಲೆ, ತಾಲೂಕು ಮಟ್ಟದಲ್ಲಿ ನಡೆಯಲಿದ್ದು, ' ನಮ್ಮ ಭಾರತ', 'ಧರ್ಮ ಸೌಹಾರ್ದತೆಯೇ ಭಾರತೀಯತೆ', 'ಶೋಷಿತರ ಬದುಕು-ಭವಿಷ್ಯ', ಸಂವಿಧಾನ ಸಂಕಷ್ಟ ಮತ್ತು ಸಂರಕ್ಷಣೆ' ಎಂಬ ವಿಷಯಗಳು ಚರ್ಚಿಸಲ್ಪಡಲಿದೆ. ವಿವಿಧ ಧರ್ಮಗಳ ಪ್ರಮುಖ ಸಂಪನ್ಮೂಲ ವ್ಯಕ್ತಿಗಳು ಪಾಳ್ಗೊಳ್ಳುವ ಈ ಅಭಿಯಾನದ ಯಶಸ್ವಿಗೆ ಸಹಕರಿಸಬೇಕೆಂದು ಸುನ್ನೀ ಕೊ-ಆರ್ಡಿನೇಶನ್ ವಿನಂತಿಸಿದೆ.

ಬಂಟ್ವಾಳದ ಅಲ್ ಹಸನಾತ್ ನಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಕೊ-ಆರ್ಡಿನೇಶನ್ ಅಧ್ಯಕ್ಷ ಎಸ್.ಪಿ.ಹಂಝ ಸಖಾಫಿ, ಕಾರ್ಯದರ್ಶಿ ಪಿ.ಪಿ.ಅಹ್ಮದ್ ಸಖಾಫಿ, ಇಸ್ಮಾಯಿಲ್ ತಂಙಳ್ ಉಜಿರೆ, ಮನ್ಶರ್  ತಂಙಳ್, ಶಾಫಿ ಸಅದಿ, ಆತೂರು ಸಅದ್ ಮುಸ್ಲಿಯಾರ್, ಕೆ.ಕೆ.ಎಂ ಸಖಾಫಿ, ಜೆಪ್ಪು ಮದನಿ, ಸಿರಾಜ್ ಸಖಾಫಿ ಕನ್ಯಾನ, ಹಮೀದ್ ಬಜ್ಪೆ, ಕೆ.ಎಂ ಸಿದ್ದೀಕ್, ಯಾಕೂಬ್ ಸಅದಿ, ಸುಫಿಯಾನ್ ಸಖಾಫಿ, ಸಾದಿಖ್ ಮಲೆಬೆಟ್ಟು, ಅಶ್ರಫ್ ಕಿನಾರ, ಕಲ್ಕಟ್ಟ ರಝ್ವಿ  ಮುಂತಾದವರು ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News