ಮೊದಲ ಏಕದಿನ ಪಂದ್ಯ: ಭಾರತ ವಿರುದ್ಧ ನ್ಯೂಝಿಲ್ಯಾಂಡ್ ಜಯಭೇರಿ

Update: 2020-02-05 10:45 GMT
Photo: Twitter(@ICC)

ಹ್ಯಾಮಿಲ್ಟನ್, ಫೆ.5: ಮೊದಲ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ ನ್ಯೂಝಿಲ್ಯಾಂಡ್ ತಂಡ ಜಯಗಳಿಸಿದ್ದು, ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಗೆಲುವಿಗೆ 348 ಗಳ ಕಠಿಣ ಗುರಿ ಪಡೆದ ನ್ಯೂಝಿಲ್ಯಾಂಡ್ ತಂಡ 48.1 ಓವರ್ ಗಳಲ್ಲಿ ಗುರಿ ತಲುಪಿತು. ನ್ಯೂಝಿಲ್ಯಾಂಡ್ ಪರ ರಾಸ್ ಟೇಲರ್ ಶತಕ (109) ರನ್ ಬಾರಿಸಿದರು. ನಾಯಕ ಟಾಮ್ ಲ್ಯಾಥಮ್ ಹಾಗೂ ಹೆನ್ರಿ ನಿಕೋಲಸ್ ಅರ್ಧ ಶತಕ ಬಾರಿಸಿ ತಂಡದ ಗೆಲುವಿಗೆ ನೆರವಾದರು. ಭಾರತದ ಪರ ದುಬಾರಿ ಬೌಲರ್ ಎನಿಸಿದ ಕುಲದೀಪ್ ಯಾದವ್ 84 ರನ್ ನೀಡಿ 2 ವಿಕೆಟ್ ಪಡೆದರು. ಶಾರ್ದೂಲ್ ಟಾಕೂರ್ ಹಾಗೂ ಮುಹಮ್ಮದ್ ಶಮಿ ತಲಾ ಒಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ ಮಾಡಿದ ಭಾರತ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 347 ರನ್ ಗಳಿಸಿತ್ತು. ಶ್ರೇಯಸ್ ಅಯ್ಯರ್ ಶತಕ(103)  ಕೆಎಲ್ ರಾಹುಲ್(ಔಟಾಗದೆ 88)ಹಾಗೂ ವಿರಾಟ್‌ಕೊಹ್ಲಿ (51)ಅರ್ಧಶತಕ ಬಾರಿಸಿ ನ್ಯೂಝಿಲ್ಯಾಂಡ್ ಗೆ ಕಠಿಣ ಗುರಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News