ಭಟ್ಕಳ: ಫೆ.6 ರಂದು ಸಂವಿಧಾನ ರಕ್ಷಣೆಗಾಗಿ ಮಹಿಳಾ ಜನಾಂದೋಲನ ಸಮಾವೇಶ
Update: 2020-02-05 18:00 IST
ಭಟ್ಕಳ: ಸಂವಿಧಾನದ ಆಶಯಗಳಿಗೆ ಧಕ್ಕೆಯುಂಟಾಗುತ್ತಿದ್ದು ಸಂವಿಧಾನ ರಕ್ಷಣೆಗಾಗಿ ಹಾಗೂ ದೇಶದ ಕರಾಳ ಕಾಯ್ದೆಗಳಾದ ಸಿಎಎ, ಎನ್.ಆರ್.ಸಿ ಮತ್ತು ಎನ್.ಪಿ.ಆರ್ ವಿರೋಧಿಸಿ ಫೆ.6 ರಂದು ಮಧ್ಯಾಹ್ನ 2 ಗಂಟೆಯಿಂದ 5 ಗಂಟೆ ವರೆಗೆ ನಗರದ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲಾ ಮೈದಾನದಲ್ಲಿ ಬೃಹತ್ ಮಹಿಳಾ ಜನಾಂದೋಲನ ಸಮಾವೇಶ ನಡೆಸುವುದಾಗಿ ವಿ.ದಿ ಪೀಪಲ್ ಆಫ್ ಇಂಡಿಯಾ ಅಭಿಯಾನದ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾವೇಶಕ್ಕೆ ಇಲ್ಲಿನ ವಿವಿಧ ಮಹಿಳಾ ಸಂಘಟನೆಗಳು ಬೆಂಬಲವನ್ನು ನೀಡಿದ್ದು, ಉ.ಕ.ಜಿಲ್ಲಾ ಸಿಪಿಐ(ಎಂ) ನಾಯಕಿ ಯಮುನಾ ಗಾಂವ್ಕರ್, ಮಹಾರಾಷ್ಟ್ರದ ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಉಬಾಲೆ, ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಸದಸ್ಯೆ ಆಸಿಫಾ ನಿಸಾರ್ ಮತ್ತಿತರರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.