×
Ad

ಒಂದು ದಿನದ ಮಗುವಿಗೂ ಕೊರೋನ ಸೋಂಕು

Update: 2020-02-05 20:17 IST

ವುಹಾನ್, ಫೆ. 5: ಚೀನಾದಲ್ಲಿ ಕೊರೋನವೈರಸ್ ಸೋಂಕಿನ ದಟ್ಟ ಪ್ರಭಾವಕ್ಕೆ ಒಳಗಾಗಿರುವ ವುಹಾನ್ ನಗರದಲ್ಲಿ 30 ಗಂಟೆಗಳ ಹಿಂದೆಯಷ್ಟೇ ಹುಟ್ಟಿದ ಮಗುವೊಂದು ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದೆ.

ಈ ಮಗು ಕೊರೋನವೈರಸ್ ಸೋಂಕಿಗೆ ಒಳಗಾದ ಅತಿ ಚಿಕ್ಕ ವ್ಯಕ್ತಿಯಾಗಿದೆ.

 ಇದು ತಾಯಿಯಿಂದ ಮಗುವಿಗೆ ಸೋಂಕು ಹರಡಿರುವ ಪ್ರಕರಣವಾಗಿರುವ ಸಾಧ್ಯತೆಯಿದೆ ಎಂದು ಪರಿಣತರು ಹೇಳಿರುವುದಾಗಿ ಸರಕಾರಿ ಮಾಧ್ಯಮ ಸಿಸಿಟಿವಿ ವರದಿ ಮಾಡಿದೆ.

ಹೆರಿಗೆಗೆ ಮುನ್ನ ತಾಯಿಯಲ್ಲಿ ಸೋಂಕು ಇರುವುದು ಪತ್ತೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News