×
Ad

ಚಿನ್ನದ ಬೆಲೆ ಹೆಚ್ಚಳಕ್ಕೆ ಮೊದಲೇ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ನಲ್ಲಿ ಮುಂಗಡ ಬುಕಿಂಗ್ ಅವಕಾಶ

Update: 2020-02-05 20:22 IST

ಉಡುಪಿ, ಫೆ.5: 2021ರ ಜನವರಿ 1ರಿಂದ ಕೇವಲ ಹಾಲ್‌ಮಾರ್ಕ್ ಹೊಂದಿರುವ ಚಿನ್ನವನ್ನು ಮಾತ್ರ ಮಾರಾಟ ಮಾಡಬೇಕೆಂದು ಭಾರತ ಸರಕಾರ ನಿಬಂಧನೆ ಹಾಕಿದೆ. ಹಾಲ್‌ಮಾರ್ಕ್ ನಮ್ಮ ದೇಶಕ್ಕೆ 20 ವರ್ಷಗಳ ಹಿಂದೆಯೇ ಬಂದಿದ್ದು, ಅಂದಿನಿಂದ ಇಂದಿನವರೆಗೆ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಕೇವಲ ಹಾಲ್‌ಮಾರ್ಕ್ ಚಿನ್ನಾಭರಣಗಳನ್ನು ಮಾರಾಟ ಮಾಡುತ್ತಿದೆ. ಇದೇ ವೇಳೆ ಗ್ರಾಹಕರ ಬಳಿ ಇರುವ ಹಳೆಯ ಚಿನ್ನಾಭರಣಗಳಲ್ಲಿ ಹಾಲ್‌ಮಾರ್ಕ್ ಇದ್ದರೂ ಅಥವಾ ಇಲ್ಲದಿದ್ದರೂ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಶೋರೂಂಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು ಅಥವಾ ಮಾರಾಟ ಮಾಡಬಹುದಾಗಿದೆ.

ಹಳೆಯ ಚಿನ್ನಾಭರಣಗಳನ್ನು ಆಧುನಿಕ ಕ್ಯಾರೆಟ್ ಅನ್ ಲೈಸರ್ ಮೂಲಕ ಅವಲೋಕನ ನಡೆಸಲಾಗುತ್ತದೆ. ಈ ಚಿನ್ನಾಭರಣಗಳನ್ನು ಆಯಾ ದಿನದ ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಶೋರೂಂಗಳಲ್ಲಿ ವಿನಿಮಯ ಅಥವಾ ಮಾರಾಟ ಮಾಡಿಕೊಳ್ಳ ಬಹುದಾಗಿದೆ.

ಇಡೀ ಪ್ರಪಂಚದಲ್ಲಿ ಚಿನ್ನ ಅತ್ಯಂತ ಬೆಲೆ ಬಾಳುವ ಲೋಹವಾಗಿದೆ. ಭಾರತದಾದ್ಯಂತ ಚಿನ್ನಕ್ಕೆ ಒಂದೇ ರೀತಿಯ ಬೆಲೆ ಇರುವುದು ಈಗಿನ ಅಗತ್ಯವಾಗಿದೆ. ಈ ದಿಸೆಯಲ್ಲಿ ಸರಕಾರ ಆಭರಣ ತಯಾರಕರು ಮತ್ತು ಮಾರಾಟಗಾರರ ಸಂಘದ ಸಹಯೋಗದಲ್ಲಿ ಅಗತ್ಯ ನಿರ್ಧಾರ ಕೈಗೊಳ್ಳಬೇಕಿದೆ. ಗ್ರಾಹಕರು ತಮ್ಮ ಚಿನ್ನಾಭರಣಗಳನ್ನು ವಿನಿಮಯ ಮಾಡುವಾಗ ಅಥವಾ ಮಾರಾಟ ಮಾಡುವಾಗ ಅವರಿಗೆ ಉತ್ತಮ ಮೌಲ್ಯ ಸಿಗುವಂತೆ ಖಾತರಿ ಪಡಿಸುವುದು ಮುಖ್ಯವಾಗಿದೆ. ಚಿನ್ನದ ಕಳ್ಳ ಸಾಗಣೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಣ ಮಾಡಿದರೆ ಸರಕಾರಕ್ಕೆ ತೆರಿಗೆ ರೂಪದಲ್ಲಿ ಆದಾಯ ಬರುವುದು ಹೆಚ್ಚಾಗುತ್ತದೆ. ಸರಕಾರ ಗಮನಾರ್ಹ ಪ್ರಮಾಣದಲ್ಲಿ ಆಮದು ಸುಂಕವನ್ನು ಕಡಿಮೆ ಮಾಡಿದರೆ ಈ ಕಳ್ಳ ಸಾಗಣೆಯನ್ನು ನಿಯಂತ್ರಣಕ್ಕೆ ತರಬಹುದಾಗಿದೆ ಎಂದು ಈ ಬಗ್ಗೆ ಮಾತನಾಡಿದ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಅಧ್ಯಕ್ಷ ಎಂ.ಪಿ.ಅಹ್ಮದ್ ಹೇಳುತ್ತಾರೆ.

‘ಚಿನ್ನದ ಬೆಲೆ ಪ್ರತಿದಿನ ಬದಲಾವಣೆಯಾಗುತ್ತಲೇ ಇರುತ್ತದೆ. ಅಮೆರಿಕನ್ ಡಾಲರ್‌ನ ವಿನಿಮಯ ದರ ವ್ಯತ್ಯಾಸವಾಗುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ವ್ಯತ್ಯಾಸವಾಗುತ್ತಿರುತ್ತವೆ. ಈ ಬೆಲೆ ಏರಿಕೆಯ ವ್ಯತ್ಯಾಸಗಳಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಗ್ರಾಹಕರು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನಲ್ಲಿ ಮದುವೆ ಆಭರಣಗಳನ್ನು ಮುಂಗಡವಾಗಿ ಬುಕ್ ಮಾಡಬಹುದಾಗಿದೆ.

ಇದಕ್ಕೆಂದೇ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮುಂಗಡ ಬುಕಿಂಗ್ ಯೋಜನೆಯನ್ನು ಪರಿಚಯಿಸಿದೆ. ಗ್ರಾಹಕರು ಮುಂಗಡ ಬುಕಿಂಗ್ ಕಾರ್ಯಕ್ರಮದಡಿ ಬುಕ್ ಮಾಡಿ, ನಂತರ ಖರೀದಿ ಮಾಡಬಹುದಾಗಿದೆ. ಅದೂ ಕೂಡ ಬುಕಿಂಗ್ ಮಾಡಿದ ದಿನದ ದರ ಅಥವಾ ಖರೀದಿಸುವ ದಿನದ ದರದಲ್ಲಿ. ಈ ಪೈಕಿ ಯಾವ ದಿನದಂದು ಕಡಿಮೆ ದರ ಇರುತ್ತದೋ ಆ ದಿನದ ಬೆಲೆಯಲ್ಲಿ ಖರೀದಿಸಬಹುದಾಗಿದೆ.’ ಎಂದವರು ತಿಳಿಸಿದ್ದಾರೆ.

ಅಲ್ಲದೇ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಗ್ರಾಹಕರು ಖರೀದಿಸಿದ ಚಿನ್ನಾಭರಣಗಳಿಗೆ ಒಂದು ವರ್ಷದವರೆಗೆ ಉಚಿತ ವಿಮೆ, ಬೈ-ಬ್ಯಾಕ್ ಗ್ಯಾರೆಂಟಿ, ಚಿನ್ನದ ವಿನಿಮಯದಲ್ಲಿ ಶೂನ್ಯ ಕಡಿತ ಮತ್ತು ಪಾರದರ್ಶಕತೆಯ ಖಾತರಿಯನ್ನು ನೀಡುತ್ತದೆ ಎಂದು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News