×
Ad

ಮಂಗಳೂರು ವಿವಿ ಸ್ನಾತಕೋತ್ತರ ಪರೀಕ್ಷೆ : ಆಳ್ವಾಸ್‍ಗೆ 12 ರ್ಯಾಂಕ್

Update: 2020-02-05 22:56 IST

ಮೂಡುಬಿದಿರೆ: ಮಂಗಳೂರು ವಿ.ವಿ ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಆಳ್ವಾಸ್ 12 ರ್ಯಾಂಕ್‍ಗಳೊಂದಿಗೆ ವಿವಿಯಲ್ಲಿ ಮತ್ತೊಮ್ಮೆ ಶೈಕ್ಷಣಿಕ ಅಗ್ರಸ್ಥಾನವನ್ನು ಪಡೆಯುವ ಮೂಲಕ ಕಳೆದ 12 ವರ್ಷಗಳಲ್ಲಿ ಅತೀ ಹೆಚ್ಚು ರ್ಯಾಂಕ್ ಗಳಿಸುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸ್ನಾತಕೋತ್ತರದಲ್ಲಿ 10 ಪ್ರಥಮ ರ್ಯಾಂಕ್, 01 ದ್ವಿತೀಯ, 01 ತೃತೀಯ ಹೀಗೆ ಒಟ್ಟು 12 ರ್ಯಾಂಕ್‍ಗಳನ್ನು ಪಡೆದುಕೊಂಡಿದೆ. ಆಳ್ವಾಸ್ ಪದವಿ ಕಾಲೇಜಿಗೆ 25 ರ್ಯಾಂಕ್‍ಗಳು ಬಂದಿದ್ದು, ಒಟ್ಟು ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಆಳ್ವಾಸ್ ಕಾಲೇಜಿಗೆ 35 ರ್ಯಾಂಕ್ ಲಭಿಸಿದೆ.

ಪ್ರಥಮ ರ್ಯಾಂಕ್:

ಶರಧಿ ಎಂ ಆರ್ (ಎಂಕಾಂ ಐಬಿಎಮ್), ಸೌಜನ್ಯ( ಎಂಎಸ್ಸಿ ಏನಾಲಿಟಿಕಲ್ ಕೆಮೆಸ್ಟ್ರಿ), ಅಂಜಲಿ ಬಾಬು (ಎಂಎಸ್ಸಿ ಸೈಕಾಲಜಿ), ಹೆಮಲತಾ ಕೆ (ಎಂಎಸ್ಸಿ ಕಂಪ್ಯೂಟರ್ ಸೈನ್ಸ್), ಸುಷ್ಮಾ ಹೊಸಕುರುಬರ(ಎಂಎಸ್ಸಿ ಆಗ್ರ್ಯಾನಿಕ್ ಕೆಮೆಸ್ಟ್ರಿ), ಕಾವ್ಯಶ್ರೀ (ಎಂಎಸ್ಸಿ ಬಟನಿ) ಎಸ್ ಅನನ್ಯ ಶಿರಿಷಾ(ಎಂಎಸ್ಸಿ ಬಯೋಟೆಕ್), ಅಂಕಿತಾ ರಾವ್ ಕೆಪಿ (ಎಂಎ ಇಂಗ್ಲೀಷ್), ಸನ್ನಿಧಿ ಅಮೀನ್( (ಎಂಎಸ್‍ಡಬ್ಲ್ಯೂ), ಪಿ ಎಸ್ ಅಕ್ಷತಾ (ಎಂವಿಎ) ಪ್ರಥಮ ರ್ಯಾಂಕ್ ಗಳಿಸಿರುತ್ತಾರೆ. ದೀಪ್ತಿ ಪಿ, ಪ್ರಮೋದನ ಉಪಾಧ್ಯಾಯ ಎಂವಿಎಯಲ್ಲಿ ದ್ವಿತೀಯ ಹಾಗೂ ತೃತೀಯ ರ್ಯಾಂಕ್ ಗಳಿಸಿರುತ್ತಾರೆ. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News