×
Ad

ಎಸ್ಕೆಎಸ್ಸೆಸ್ಸೆಫ್ ಮಿತ್ತಬೈಲ್ ಕ್ಲಸ್ಟರ್: ನೂತನ ಪದಾಧಿಕಾರಿಗಳ ಆಯ್ಕೆ

Update: 2020-02-05 23:01 IST

ಬಂಟ್ವಾಳ : ಎಸ್ಕೆಎಸ್ಸೆಸೆಫ್ ಮಿತ್ತಬೈಲ್ ಕ್ಲಸ್ಟರ್ ನ ವಾರ್ಷಿಕ ಮಹಾ ಸಭೆ ಇತ್ತೀಚೆಗೆ ಸಂಘಟನೆಯ ಕಚೇರಿಯಲ್ಲಿ ಕ್ಲಸ್ಟರ್ ಅಧ್ಯಕ್ಷ ಅಲ್ತಾಫ್ ಮಿತ್ತಬೈಲ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ 2020/22 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 

ನೂತನ ಅಧ್ಯಕ್ಷರಾಗಿ ಅಶ್ರಫ್ ಶಾಂತಿಅಂಗಡಿ, ಉಪಾಧ್ಯಕ್ಷರಾಗಿ ಅಲ್ತಾಫ್ ಬಿ.ಸಿ.ರೋಡ್, ಪ್ರಧಾನ  ಕಾರ್ಯದರ್ಶಿಯಾಗಿ ಮುಹಮ್ಮದ್ ಖಲಂದರ್ ತುಂಬೆ, ಕೋಶಾಧಿಕಾರಿ ಶಬೀರ್ ಪಲ್ಲಮಜಲ್, ಸಂಘಟನಾ  ಕಾರ್ಯದರ್ಶಿಯಾಗಿ ನಾಸಿರ್ ಜಿ.ಕೆ. ಶಾಂತಿಅಂಗಡಿ, ಉಪ ಸಮಿತಿಗಳಾದ ಇಬಾದ್ ಕಾರ್ಯದರ್ಶಿಯಾಗಿ ಫಕ್ರುದ್ದೀನ್ ದಾರಿಮಿ ಬಿ.ಸಿ.ರೋಡ್, ವಿಖಾಯ ಕಾರ್ಯದರ್ಶಿಯಾಗಿ ಶಾಫಿ ಜಿ.ಕೆ. ಶಾಂತಿ ಅಂಗಡಿ, ಸರ್ಗಾಲಯಂ ಕಾರ್ಯದರ್ಶಿಯಾಗಿ ಅನ್ವರ್ ಕುಮೈಲ್, ಟ್ರೆಂಡ್ ಕಾರ್ಯದರ್ಶಿಯಾಗಿ ಅಬ್ದುಲ್ ವಾಜಿದ್ ಪರ್ಲಿಯಾ, ಸಹಚಾರಿ ಕಾರ್ಯದರ್ಶಿಯಾಗಿ ಉಬೈದ್ ತುಂಬೆ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಯಾಕೂಬ್ ತಾಳಿಪಡ್ಪು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಯೂನುಸ್ ಪರ್ಲಿಯಾ, ಶಾಕೀರ್ ಶಾಂತಿಅಂಗಡಿ, ಅಬ್ದುಲ್ ಬಶೀರ್ ಮಜಲ್, ಅಬ್ದುಲ್ ಜಬ್ಬಾರ್ ಪಲ್ಲಮಜಲ್, ಅಬ್ದುಲ್ ರಹ್ಮಾನ್ ತಾಳಿಪಡ್ಪು, ರಫೀಕ್ ತಾಳಿಪಡ್ಪು, ಇಬ್ರಾಹೀಂ ಪಲ್ಲಮಜಲ್, ಬಶೀರ್ ಪಲ್ಲಮಜಲ್, ವಲಯ ಕೌನ್ಸಿಲರ್ಸ್ ಗಳಾಗಿ ಇರ್ಷಾದ್ ದಾರಿಮಿ ಶಾಂತಿಅಂಗಡಿ, ಹನೀಫ್ ತಾಳಿಪಡ್ಪು, ರಹ್ಮಾನ್ ತಾಳಿಪಡ್ಪು, ಶಾಕೀರ್ ಶಾಂತಿಅಂಗಡಿ, ಹಮೀದ್ ತುಂಬೆ, ಸಾದಿಖ್ ತುಂಬೆ, ಬಶೀರ್ ಮಜಲ್, ಯೂನುಸ್ ಪರ್ಲಿಯಾ, ಫಾರೂಕ್ ಪರ್ಲಿಯಾ, ಬಶೀರ್ ಪಲ್ಲಮಜಲ್, ಇಬ್ರಾಹಿಂ ಪಲ್ಲಮಜಲ್, ಇಮ್ರಾನ್ ತಾಳಿಪಡ್ಪು, ನೌಫಲ್ ಹುದವಿ ಬಿ ಸಿ ರೋಡ್, ಅನ್ವರ್ ಬಿ.ಸಿ.ರೋಡ್, ಹಮೀದ್ ಶಾಂತಿ ಅಂಗಡಿ, ಶರೀಫ್ ಪರ್ಲಿಯಾ ಅವರನ್ನು ಆಯ್ಕೆ ಮಾಡಲಾಯಿತು.

ಪಕ್ರುದ್ದೀನ್ ದಾರಿಮಿ ಸಭೆಯನ್ನು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಖಲಂದರ್ ಸ್ವಾಗತಿಸಿ ಲೆಕ್ಕ ಪತ್ರವನ್ನು ಸಭೆಗೆ ಮಂಡಿಸಿದರು. ಚುನಾವಣಾ ವೀಕ್ಷಕರಾಗಿ ಸಫ್ವಾನ್ ಬಂಟ್ವಾಳ ಮತ್ತು ಖಾದರ್ ಸಜೀಪ ಕಾರ್ಯನಿರ್ವಹಿಸಿದರು. ಮಿತ್ತಬೈಲ್ ಉಸ್ತಾದರ ಸ್ಮರಣಾರ್ಥ ಬಿ.ಸಿ.ರೋಡ್ ಕ್ಲಸ್ಟರ್ ಅನ್ನು ಮಿತ್ತಬೈಲ್ ಕ್ಲಸ್ಟರ್ ಆಗಿ ಹೆಸರನ್ನು ಬದಲಿಸಲಾಯಿತು.

ಕ್ಲಸ್ಟರ್ ನಲ್ಲಿ ಸಹಚಾರಿ ಸೆಂಟರ್ ಆರಂಭಿಸಲು ಕಾರಣಕರ್ತರಾದ ಅಲ್ತಾಫ್ ಮಿತ್ತಬೈಲ್ ರನ್ನು ಸನ್ಮಾನಿಸಲಾಯಿತು. ಕ್ಲಸ್ಟರ್ ಸದಸ್ಯರಾದ ಶಾಕೀರ್ ಶಾಂತಿಅಂಗಡಿ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News