×
Ad

ತುಂಬೆ: ಎಸ್ ವೈ ಎಸ್ ನೂತನ ಶಾಖೆ ಅಸ್ತಿತ್ವಕ್ಕೆ

Update: 2020-02-05 23:05 IST

ಬಂಟ್ವಾಳ : ಎಸ್. ವೈ ಎಸ್. ತುಂಬೆ ಶಾಖೆಯ 2020-22ನೇ ಸಾಲಿನ ನೂತನ ಶಾಖಾ ರಚನಾ ಸಭೆಯು ಎಸ್ಕೆಎಸ್ಸೆಸ್ಸೆಫ್ ತುಂಬೆ ಶಾಖಾ ಕಚೇರಿಯಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಹಾಜಿ ಅಬ್ದುರ್ರಹ್ಮಾನ್ ಹದ್ದಾದಿ, ಉಪಾಧ್ಯಕ್ಷರಾಗಿ ಟಿ.ಕೆ.ಶರೀಫ್, ಹಮೀದ್ ಕಾಣೆಮ್ಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಪೆರ್ನೆ, ಕೋಶಾಧಿಕಾರಿ ಮುಹಮ್ಮದ್ ಶಾಫಿ ಕಾಲನಿ, ಜೂತೆ ಕಾರ್ಯದರ್ಶಿಯಾಗಿ ಹನೀಫ್ ಉಜಿರೆಪಲ್ಲ, ಟಿಎಸ್.ರಮ್ಲಾನ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಫಯಾಝ್, ಹಕೀಂ ರೋಯಲ್, ಹಂಝ ಕುಂಪನ ಮಜಲ್, ಉಬೈದ್ ತುಂಬೆ, ರಹಿಮಾನ್ ಬಡಕಬೈಲ್, ಹಕೀಂ ಪೇರ್ಲಬೈಲ್, ಹನೀಫ್ ಬೊಳ್ಳಾರಿ ಹಾಗೂ ಮಂಡಲ ಕೌನ್ಸಿಲರ್ಸ್ ಗಳಾಗಿ ಹಾಜಿ ಅಬ್ದುರ್ರಹ್ಮಾನ್ ಹದ್ದಾದಿ, ಅಬ್ದುಲ್ ಹಮೀದ್ ಪೆರ್ನೆ ಹಾಗೂ ಹಕೀಂ ರೋಯಲ್ ಅವರನ್ನು ಆಯ್ಕೆ ಮಾಡಲಾಯಿತು.

ಜಂ ಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯರಾದ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಉಸ್ತಾದ್ ಸಭೆಯನ್ನು ಉದ್ಘಾಟಿಸಿದರು. ಎಸ್ಕೆಎಸ್ಸೆಸ್ಸೆಫ್ ತುಂಬೆ ಶಾಖೆಯ ನೂತನ ಅಧ್ಯಕ್ಷ ಮುಹಮ್ಮದ್ ಇಸಾಕ್ ಅಧ್ಯಕ್ಷತೆಯಲ್ಲಿ ಆರಂಭವಾದ ಸಭೆಯಲ್ಲಿ ಚುನಾವಣಾ ವೀಕ್ಷಕರಾಗಿ ಟಿ.ಎಂ.ಹನೀಫ್ ಮುಸ್ಲಿಯಾರ್, ಅಬ್ದುಲ್ ಸಲಾಂ ಮಿತ್ತಬೈಲ್ ಕಾರ್ಯನಿರ್ವಹಿಸಿದರು.

ಸಭೆಯಲ್ಲಿ ಸಂಘದ ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ದಾವೂದ್ ಇಬ್ರಾಹಿಂರನ್ನು ಹಾಗೂ ನೂತನ ಎಸ್ ವೈ ಎಸ್ ಅಧ್ಯಕ್ಷರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ನ ಕೋ ಆರ್ಡಿನೇಟರ್ ಮುಹಮ್ಮದ್ ಅಲಿ,  ಎಸ್ಕೆಎಸ್ಸೆಸ್ಸೆಫ್ ತುಂಬೆ ಶಾಖೆಯ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಊರಿನ ಹಿರಿಯ ವ್ಯಕ್ತಿಗಳು ಉಪಸ್ಥಿತರಿದ್ದರು.

ಎಸ್ಕೆಎಸ್ಸೆಸ್ಸೆಫ್ ತುಂಬೆ ಶಾಖೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಖಲಂದರ್ ಸ್ವಾಗತಿಸಿ, ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News