ಬಾಡಿಗೆ ತಾಯ್ತನಕ್ಕೆ ಸಂಬಂಧಿಕರೇ ಆಗಬೇಕಾಗಿಲ್ಲ: ಸಂಸದೀಯ ಸಮಿತಿ

Update: 2020-02-05 18:01 GMT

ಹೊಸದಿಲ್ಲಿ, ಫೆ. 5: ಸಂಬಂಧಿಕರು ಮಾತ್ರವಲ್ಲ, ಬದಲಾಗಿ ಯಾವುದೇ ಆಕಾಂಕ್ಷಿ ಮಹಿಳೆಗೂ ಬಾಡಿಗೆ ತಾಯ್ತನಕ್ಕೆ ಅವಕಾಶ ನೀಡಬೇಕು ಎಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ. ರಾಜ್ಯ ಸಭೆಯ 23 ಸದಸ್ಯರ ಆಯ್ಕೆ ಸಮಿತಿ ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ 2019ಕ್ಕೆ ಸಂಬಂಧಿಸಿ 15 ಪ್ರಮುಖ ಬದಲಾವಣೆ ಮಾಡಿದೆ.

35ರಿಂದ 45 ವರ್ಷಗಳ ಒಳಗಿನ ಪ್ರಾಯ ಗುಂಪಿನ ವಿಧವೆ ಅಥವಾ ವಿಚ್ಛೇದಿತಯಂತಹ ಒಬ್ಬಂಟಿಯಾಗಿರುವ ಮಹಿಳೆಯರಿಗೆ ಕೂಡ ಬಾಡಿಗೆ ತಾಯ್ತನ ಪಡೆಯಲು ಅವಕಾಶ ನೀಡಬೇಕು ಎಂದು ಸಮಿತಿ ಪ್ರತಿಪಾದಿಸಿದೆ. ಬಾಡಿಗೆ ತಾಯ್ತನಕ್ಕೆ ಆಕೆಯ ನಿಕಟ ಸಂಬಂಧಿಯಾಗಿರಬೇಕು ಎಂಬ ನಿಯಮದಿಂದ ಅವಶ್ಯಕತೆ ಉಳ್ಳ ವ್ಯಕ್ತಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಅಭಿಪ್ರಾಯಿಸಿರುವ ಸಮಿತಿ ವಿಧೇಯಕದಲ್ಲಿರುವ ಈ ಕಾನೂನನ್ನು ಕೈಬಿಡುವಂತೆ ಶಿಫಾರಸು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News