ಬಿಎಂಕೆ ಬಶೀರ್
Update: 2020-02-06 22:55 IST
ಮಂಗಳೂರು, ಫೆ.6: ಕೃಷ್ಣಾಪುರ ಏಳನೆ ಬ್ಲಾಕ್ ನಿವಾಸಿ ಬಿಎಂಕೆ ಬಶೀರ್ (52) ಗುರುವಾರ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಕಳೆದ 30 ವರ್ಷದಿಂದ ಗಲ್ಫ್‌ನಲ್ಲಿದ್ದ ಇವರು ಇತ್ತೀಚೆಗೆ ಅನಾರೋಗ್ಯಕ್ಕೀಡಾಗಿದ್ದರು. 10 ದಿನದ ಹಿಂದೆಯಷ್ಟೇ ಊರಿಗೆ ಆಗಮಿಸಿದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದ ಕಾರಣ ಬುಧವಾರ ಬೆಂಗಳೂರಿನ ಆಸ್ಪತ್ರೆಯಿಂದ ಅವರನ್ನು ಮಂಗಳೂರಿಗೆ ಕರೆ ತರಲಾಗಿತ್ತು. ಗುರುವಾರ ಮಧ್ಯಾಹ್ನದ ವೇಳೆಗೆ ಅವರು ಕೊನೆಯುಸಿರೆಳೆದರು.
ಊರಿನ ಅನೇಕ ಯುವಕರಿಗೆ ಗಲ್ಫ್‌ನಲ್ಲಿ ಉದ್ಯೋಗ ದೊರಕಿಸಿಕೊಟ್ಟಿದ್ದ ಅವರು ಸಮಾಜ ಸೇವೆಯ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದರು. ಕೃಷ್ಣಾಪುರದ ಪ್ಯಾರಡೈಸ್ ಕ್ಲಬ್ ಹಾಗೂ ಚೊಕ್ಕಬೆಟ್ಟು ಸಲಫಿ ಮಸೀದಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.