2100ರ ವೇಳೆಗೆ 80 ವಿಮಾನ ನಿಲ್ದಾಣಗಳು ನೀರಿನಡಿಯಲ್ಲಿ
Update: 2020-02-06 23:52 IST
ನ್ಯೂಯಾರ್ಕ್, ಫೆ. 6: ಜಾಗತಿಕ ತಾಪಮಾನವು ಇದೇ ಮಟ್ಟದಲ್ಲಿ ಮುಂದುವರಿದರೆ ಈ ಶತಮಾನದ ಅಂತ್ಯದ ವೇಳೆಗೆ ನ್ಯೂಯಾರ್ಕ್ ಸೇರಿದಂತೆ ಜಗತ್ತಿನ ಕೆಲವು ಅತ್ಯಂತ ನಿಬಿಡ ವಿಮಾನ ನಿಲ್ದಾಣಗಳು ನೀರಿನ ಅಡಿಯಲ್ಲಿರುವ ಸಾಧ್ಯತೆಯಿದೆ ಎಂದು ಸಂಶೋಧಕರು ಬುಧವಾರ ಹೇಳಿದ್ದಾರೆ.
ಸಮುದ್ರ ಮಟ್ಟ ಒಂದು ಮೀಟರ್ ಏರಿದರೆ, ಜಗತ್ತಿನಾದ್ಯಂತ ಇರುವ ಸುಮಾರು 80 ವಿಮಾನ ನಿಲ್ದಾಣಗಳು 2100ರ ವೇಳಗೆ ನೀರಿನಿಂದ ಆವರಿಸಲ್ಪಟ್ಟಿರುತ್ತವೆ ಎಂದು ವಾಶಿಂಗ್ಟನ್‌ನ ವಿಶ್ವ ಸಂಪನ್ಮೂಲ ಸಂಸ್ಥೆ (ಡಬ್ಲುಆರ್‌ಐ) ನಡೆಸಿದ ವಿಶ್ಲೇಷಣೆಯಲ್ಲಿ ಬಯಲಾಗಿದೆ.
ಇಂಗಾಲದ ಡೈ ಆಕ್ಸೈಡ್ ಅನಿಲದ ಉತ್ಪಾದನೆ ಇದೇ ಪ್ರಮಾಣದಲ್ಲಿ ಮುಂದುವರಿದರೆ, ಸಮುದ್ರಗಳ ಮಟ್ಟವು 60ರಿಂದ 110 ಸೆಂಟಿಮೀಟರ್‌ನಷ್ಟು ಹೆಚ್ಚಬಹುದು ಎಂದು ಹವಾಮಾನ ಬದಲಾವಣೆ ಕುರಿತ ಅಂತರ್‌ರಾಷ್ಟ್ರೀಯ ಸಮಿತಿಯ 2019ರ ವರದಿಯೊಂದು ಎಚ್ಚರಿಸಿತ್ತು.