ಆಮ್ ಆದ್ಮಿ ಪಕ್ಷದ ‘ದಿಲ್ಲಿ ಅಭಿವೃದ್ಧಿ ಮಾದರಿ’ಶ್ಲಾಘಿಸಿದ ಶಿವಸೇನೆ

Update: 2020-02-07 09:16 GMT

ಮುಂಬೈ, ಫೆ.7: ಕಳೆದ ಐದು ವರ್ಷಗಳಿಂದ ಉತ್ತಮ ಕೆಲಸ ಮಾಡಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರನ್ನು ಶಿವಸೇನೆ ಶ್ಲಾಘಿಸಿದೆ. ಕೇಂದ್ರ ಸರಕಾರ ದಿಲ್ಲಿಯ ಅಭಿವೃದ್ಧಿಯ ಮಾದರಿಯನ್ನು ಇತರ ರಾಜ್ಯಗಳಿಗೂ ಪರಿಚಯಿಸಬೇಕೆಂದು ಒತ್ತಾಯಿಸಿದೆ.

ದಿಲ್ಲಿ ವಿಧಾನಸಭಾ ಚುನಾವಣೆಯ ಮುನ್ನಾದಿನ ಶಿವಸೇನೆ ಕೇಜ್ರಿವಾಲ್ ಸರಕಾರವನ್ನು ಶ್ಲಾಘಿಸಿದೆ.

ದಿಲ್ಲಿಯ ಜನರ ಬೇಡಿಕೆಯನ್ನು ಈಡೇರಿಸಿರುವ ಅರವಿಂದ ಕೇಜ್ರಿವಾಲ್‌ರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅಥವಾ ಗೃಹಸಚಿವ ಅಮಿತ್ ಶಾ ಸನ್ಮಾನಿಸಬೇಕಾಗಿದೆ. ಇದರ ಬದಲಿಗೆ ಹಿಂದುತ್ವ ಹಾಗೂ ಮುಸ್ಲಿಮರ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆ ಗೆಲ್ಲಲು ಬಿಜೆಪಿ ನಾಯಕರು ಹಾಗೂ ಹಾತೊರೆಯುತ್ತಿದ್ದಾರೆ ಎಂದು ಶಿವಸೇನೆ ತಿಳಿಸಿದೆ.

ಬಿಜೆಪಿ ಪಕ್ಷ ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ನಲ್ಲಿ ಅಧಿಕಾರ ಕಳೆದುಕೊಂಡಿದೆ. ಹೀಗಾಗಿ ದಿಲ್ಲಿಯಲ್ಲಿ ಅಧಿಕಾರದ ಗದ್ದುಗೇರಲು ಬಯಸಿದೆ. ಇದರಲ್ಲಿ ತಪ್ಪೇನಿಲ್ಲ. ದಿಲ್ಲಿ ಚುನಾವಣೆಯನ್ನು ಗೆಲ್ಲುವ ಸಲುವಾಗಿ ದೇಶದ 200 ಸಂಸದರು, ಬಿಜೆಪಿ ಆಡಳಿತವಿರುವ ಮುಖ್ಯಮಂತ್ರಿಗಳು ಹಾಗೂ ಇಡೀ ಸಂಪುಟ ಸಚಿವರು ದಿಲ್ಲಿಯಲ್ಲಿ ಬೀಡುಬಿಟ್ಟಿದ್ದಾರೆ. ಈ ಎಲ್ಲ ಪ್ರಯತ್ನದ ಹೊರತಾಗಿಯೂ ಬಿಜೆಪಿಗಿಂತ ಅರವಿಂದ ಕೇಜ್ರಿವಾಲ್ ನೇತೃತ್ವದ ಸರಕಾರವೇ ಸ್ಪಷ್ಟವಾಗಿ ಗೆಲ್ಲಬಲ್ಲ ನೆಚ್ಚಿನ ಸರಕಾರವಾಗಿ ಹೊರಹೊಮ್ಮಿದೆೆ ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News