ರಾಷ್ಟ್ರಮಟ್ಟ ನಾಟಕ ಸ್ಪರ್ಧೆ: ಎಂಜಿಎಂ ಕಾಲೇಜಿಗೆ ಅಗ್ರ ಪ್ರಶಸ್ತಿ
Update: 2020-02-07 20:19 IST
ಉಡುಪಿ, ಫೆ.7: ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟೀಸ್ ಆಶ್ರಯದಲ್ಲಿ ಹೊಸದಿಲ್ಲಿ ಸಮೀಪದ ನೊಯಿಡಾದ ಅಮಿಟಿ ವಿವಿಯಲ್ಲಿ ರಾಷ್ಟ್ರೀಯ ಯುವ ಉತ್ಸವದ ಅಂಗವಾಗಿ ನಡೆದ ರಾಷ್ಟ್ರ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಉಡುಪಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರದರ್ಶಿಸಿದ ‘ಪಂಚವಟಿ’ ನಾಟಕ ಅಗ್ರಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಕಾಲೇಜಿನ ಕನ್ನಡ ಉಪನ್ಯಾಸಕ ಪ್ರಶಾಂತ್ ಉದ್ಯಾವರ ಅವರ ನಿರ್ದೇಶನದಲ್ಲಿ ಎಂಜಿಎಂ ವಿದ್ಯಾರ್ಥಿಗಳು ‘ಪಂಚವಟಿ’ ಏಕಾಂಕ ನಾಟಕವನ್ನು ಪ್ರದರ್ಶಿಸಿದ್ದರು.
ಅದೇ ರೀತಿ ‘ಅಭಿವೃದ್ಧಿಗಾಗಿ ಸಮರ್ಥ ಭಾರತ’ ವಿಷಯದ ಮೇಲೆ ನಡೆದ ರಾಷ್ಟ್ರೀಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿ ಶ್ರೇಯಸ್ ಕೋಟ್ಯಾನ್ ದ್ವಿತೀಯ ಸ್ಥಾನ ಪಡೆದಿದ್ದಾರೆ.