ಶ್ಯಾಡೋ ಕಿರುಚಿತ್ರಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿ
Update: 2020-02-07 20:20 IST
ಮಣಿಪಾಲ, ಫೆ.7: ಮಣಿಪಾಲ ಮಾಹೆಯ ಉದ್ಯೋಗಿ ಸುಹಾಸ್ ಶೆಣೈ ನಿರ್ಮಿಸಿದ ‘ಶ್ಯಾಡೋ’(ನೆರಳು) ಕಿರುಚಿತ್ರವು ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದೆ.
ಭಾರತ ಸರಕಾರದ ಮಾನವ ಸಂಪನ್ಮೂಲ ಸಚಿವಾಲಯದ ಆ್ಯಂಟಿ ರ್ಯಾಗಿಂಗ್ ಸೆಲ್ ಏರ್ಪಡಿಸಿದ್ದ ಕಿರುಚಿತ್ರ ಸ್ಪರ್ಧೆಯಲ್ಲಿ ಶಾಡೋ ಕಿರುಚಿತ್ರ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದೆ. ಫೆ.11ರಂದು ನವೆಹಲಿಯಲ್ಲಿ ಜರಗುವ ಸಮಾರಂಭದಲ್ಲಿ ಮಣಿಪಾಲದ ಸುಹಾಸ್ ಶೆಣೈ ಈ ಪ್ರಶಸ್ತಿ ಯನ್ನು ಸ್ವೀಕರಿಸಲಿದ್ದಾರೆ. ಇವರು ಈ ಕಿರುಚಿತ್ರಕ್ಕೆ ಸಂಕಲನ, ಸಂಗೀತ ಹಾಗೂ ನಿರ್ಮಾಪಕರಾಗಿ ಕಾರ್ಯನಿರ್ಹಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.