ಫೆ.9ರಂದು ಕಾರ್ಮಿಕ ಚಳುವಳಿಯ 100ನೆ ವರ್ಷಾಚರಣೆ
ಉಡುಪಿ, ಫೆ.7: ಸಿಐಟಿಯು ಸುವರ್ಣ ಮಹೋತ್ಸವ ಹಾಗೂ ಕಾರ್ಮಿಕ ಚಳುವಳಿಯ 100ನೇ ವರ್ಷಾಚರಣೆಯ ಸಂಭ್ರಮ ಕಾರ್ಯಕ್ರಮವು ಉಡುಪಿ ಬನ್ನಂಜೆ ಶ್ರೀನಾರಾಯಣ ಗುರು ಸಭಾಭವನದಲ್ಲಿ ಫೆ.9ರಂದು ನಡೆಯಲಿದೆ.
ಬೆಳಗ್ಗೆ 9:30ಕ್ಕೆ ಉಡುಪಿಯ ಜೋಡುಕಟ್ಟೆ ಬಳಿಯಿಂದ ಮೆರವಣಿಗೆ ಹೊರಟು ಕೆಎಂ ಮಾರ್ಗ, ಶಿರಿಬೀಡು, ಬನ್ನಂಜೆ ಮಾರ್ಗವಾಗಿ ಸಭಾಭವನ ತಲುಪಲಿದೆ. ಬಳಿಕ ಸಭಾಕಾರ್ಯಕ್ರಮವನ್ನು ಸಿಐಟಿಯು ಕರ್ನಾಟಕ ರಾಜ್ಯ ಉಪಾಧ್ಯಕ್ಷ ಡಾ.ಕೆ.ಪ್ರಕಾಶ್ ಉದ್ಘಾಟಿಸಲಿರುವರು.
ಮುಖ್ಯ ಅತಿಥಿಗಳಾಗಿ ಬ್ಯಾಂಕ್ ಎಂಪ್ಲಾಯಿಸ್ ಫೆಡರೇಶನ್ ಆಫ್ ಇಂಡಿಯಾ ಇದರ ರಾಜ್ಯ ಉಪಾಧ್ಯಕ್ಷ ಬಿ.ಎಂ.ಮಾಧವ, ವಿಮಾ ನೌಕರರ ಸಂಘ ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಕುಂದರ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಗಾರ ಭಾಗವಹಿಸಲಿರುವರು. ಅಧ್ಯಕ್ಷತೆಯನ್ನು ಸಿಐಟಿಯು ಉಡುಪಿ ತಾಲೂಕು ಅಧ್ಯಕ್ಷ ರಾಮ ಕಾರ್ಕಡ ವಹಿಸಲಿರುವರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಸಿಐಟಿಯು ತಾಲೂಕು ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.