ವಿದ್ಯಾಲತಾಗೆ ಡಾಕ್ಟರೇಟ್
Update: 2020-02-07 21:54 IST
ಉಡುಪಿ, ಫೆ.7: ಬ್ರಹ್ಮಾವರ ಎಸ್‌ಎಂಎಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ವಿದ್ಯಾಲತ ಅವರ ಮಹಾಪ್ರಬಂಧಕ್ಕೆ ಹಂಪಿ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ದೊರಕಿದೆ.
ವಿದ್ಯಾಲತಾ ಅವರು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ವಿದ್ವಾಂಸ ಡಾ.ಪಾದೇಕಲ್ಲು ವಿಷ್ಣು ಭಟ್ಟರ ಮಾರ್ಗದರ್ಶನ ದಲ್ಲಿ ‘ಕರಾವಳಿಯ ಕನ್ನಡ ಕಾದಂಬರಿಗಳಲ್ಲಿ ಸಾಮಾಜಿಕ ಸಂರಚನೆಯ ಸ್ವರೂಪ’ ಎನ್ನುವ ಈ ಮಹಾಪ್ರಬಂಧವನ್ನು ಸಿದ್ದಪಡಿಸಿದ್ದರು.