×
Ad

ಎರಡನೇ ಏಕದಿನ:ಭಾರತಕ್ಕೆ 274 ರನ್ ಗುರಿ ನೀಡಿದ ನ್ಯೂಝಿಲ್ಯಾಂಡ್

Update: 2020-02-08 11:25 IST

ಆಕ್ಲೆಂಡ್, ಫೆ.8: ಆರಂಭಿಕ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್(79, 79 ಎಸೆತ)ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ರಾಸ್ ಟೇಲರ್(ಔಟಾಗದೆ 73, 74 ಎಸೆತ)ಬಿರುಸಿನ ಬ್ಯಾಟಿಂಗ್ ನೆರವಿನಿಂದ ನ್ಯೂಝಿಲ್ಯಾಂಡ್ ತಂಡ ಎರಡನೆ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಗೆಲುವಿಗೆ 274 ರನ್ ಗುರಿ ನೀಡಿದೆ.

ಶನಿವಾರ ಟಾಸ್ ಜಯಿಸಿದ ಭಾರತದ ನಾಯಕ ವಿರಾಟ್ ಕೊಹ್ಲಿ ನ್ಯೂಝಿಲ್ಯಾಂಡ್‌ನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿದರು. ನ್ಯೂಝಿಲ್ಯಾಂಡ್ ಉತ್ತಮ ಆರಂಭದ ಹೊರತಾಗಿಯೂ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 273 ರನ್ ಗಳಿಸಿತು.

ಇನಿಂಗ್ಸ್ ಆರಂಭಿಸಿದ ಗಪ್ಟಿಲ್(79,79 ಎಸೆತ, 8 ಬೌಂಡರಿ,3ಸಿಕ್ಸರ್)ಹಾಗೂ ನಿಕೊಲ್ಸ್(41, 59 ಎಸೆತ)ಮೊದಲ ವಿಕೆಟ್‌ಗೆ 93 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಅಗ್ರ ಕ್ರಮಾಂಕದಲ್ಲಿ ಗಪ್ಟಿಲ್, ನಿಕೊಲ್ಸ್, ಬ್ಲಂಡೆಲ್(22) ಹಾಗೂ ಟೇಲರ್(ಔಟಾಗದೆ 73, 74 ಎಸೆತ, 6 ಬೌಂಡರಿ, 2 ಸಿ.)ಒಂದಷ್ಟು ಹೋರಾಟ ನೀಡಿದರು. ಟೇಲರ್ ಹಾಗೂ ಜಮೀಸನ್(ಔಟಾಗದೆ 25, 24 ಎಸೆತ)9ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 76 ರನ್ ಸೇರಿಸಿ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.

ಭಾರತದ ಪರ ಸ್ಪಿನ್ನರ್ ಯಜುವೇಂದ್ರ ಚಹಾಲ್(3-58)ಹಾಗೂ ವೇಗಿ ಶಾರ್ದೂಲ್ ಠಾಕೂರ್(2-60)ಐದು ವಿಕೆಟ್‌ಗಳನ್ನು ಹಂಚಿಕೊಂಡರು. ಗಪ್ಟಿಲ್ ಹಾಗೂ ನೀಶಾಮ್ ರನೌಟಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News