ಫೆ.13-14: ಎ.ಜೆ. ಆಸ್ಪತ್ರೆಯಲ್ಲಿ ಸಂಧಿವಾತ ಉಚಿತ ತಪಾಸಣಾ ಶಿಬಿರ

Update: 2020-02-08 06:57 GMT

ಮಂಗಳೂರು, ಫೆ.8: ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಫೆ.13 ಮತ್ತು 14ರಂದು ಸಂಧಿವಾತ ಸಂಬಂಧಿತ ರೋಗಗಳ (ರುಮಟಾಲಜಿ) ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಿದೆ.

ವಿವಿಧ ಸಂಧಿವಾತ ಸಮಸ್ಯೆಗಳಿಂದ ಬಳಲುತ್ತಿರುವ ಜನರ ಅನುಕೂಲಕ್ಕಾಗಿ ಆಸ್ಪತ್ರೆಯ ಹೊರ ರೋಗಿ ವಿಭಾಗದಲ್ಲಿ (2ನೇ ಮಹಡಿ) ಈ ಎರಡು ದಿನಗಳಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಶಿಬಿರ ನಡೆಯಲಿದೆ.

ಊತದಿಂದ ಕೂಡಿದ ಸಂಧಿ ನೋವು, ಆಗಾಗ ಕಾಡುವ ಜ್ವರ, ಚರ್ಮದ ದದ್ದು ಹಾಗೂ ಸಂಧುಗಳಲ್ಲಿ ನೋವು, ಎಸ್.ಎಲ್.ಇ. (ಸಿಸ್ಟಮಿಕ್ ಲ್ಯೂಪಸ್ ಎರಿಥ್ಮೆಟೋಸಿಸ್), ಗರ್ಭಿಣಿಯರಲ್ಲಿ ಬರುವ ರುಮಟಲಾಜಿಕಲ್ ಸ್ಥಿತಿಗಳು, ಈಗಾಗಲೇ ಸಂಧಿವಾತ ರೋಗ ನಿರ್ಣಯಗೊಂಡವರು, ರುಮಟಾಯಿಡ್ ಸಂಧಿವಾತದಿಂದ ಬಳಲುತ್ತಿರುವವರು, ಕನೆಕ್ಟಿವ್ ಟಿಶ್ಯೂ ಕಾಯಿಲೆಯಿಂದ ಬಳಲುತ್ತಿರುವವರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು.

ಶಿಬಿರದ ನೋಂದಣಿ ಹಾಗೂ ಪ್ರಥಮ ಸಮಾಲೋಚನೆ ಉಚಿತ, ಹೊರರೋಗಿ ತಪಾಸಣೆಯಲ್ಲಿ 25 ಶೇ. ರಿಯಾಯಿತಿ, ಒಳರೋಗಿಯಾಗಿ ದಾಖಲಾದಲ್ಲಿ ಬಿಲ್ಲಿನ ಮೇಲೆ 10 ಶೇ. ರಿಯಾಯಿತಿ ಸಿಗಲಿದೆ.ಶಿಬಿರದಲ್ಲಿ ಖ್ಯಾತ ಕನ್ಸಲ್ಟೆಂಟ್ ರುಮಟಾಲಜಿಸ್ಟ್ ಡಾ.ಗಂಗಾರತ್ನ ಕೃಷ್ಣ ಸಮಾಲೋಚನೆಗೆ ಲಭ್ಯವಿರುವರು.

ಶಿಬಿರದ ನೋಂದಣಿಗಾಗಿ 0824-2223252/8494890600 ಅನ್ನು ಸಂಪರ್ಕಿಸುವಂತೆ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News