ಫೆ.9ರಂದು ಬ್ಲಡ್ ಸೈಬೋ ವತಿಯಿಂದ 4 ಕೇಂದ್ರಗಳಲ್ಲಿ ರಕ್ತದಾನ ಶಿಬಿರ

Update: 2020-02-08 07:16 GMT

ಮಂಗಳೂರು, ಫೆ.8: ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋ ವತಿಯಿಂದ ಫೆಬ್ರವರಿ 9 ರಂದು ವಿವಿಧ 4 ಕೇಂದ್ರಗಳಲ್ಲಿ ಏಕಕಾಲದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಕಿನ್ಯ ಸೆಕ್ಟರ್ ವತಿಯಿಂದ ಬೆಳರಿಂಗೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 138ನೇ ಶಿಬಿರ, ಮಂಜನಾಡಿ ಸೆಕ್ಟರ್ ವತಿಯಿಂದ ಕಲ್ಕಟ್ಟ ರಿಫಾಯಿಯ್ಯ ಮದ್ರಸ ಹಾಲ್‌ನಲ್ಲಿ 139ನೇ ಶಿಬಿರ, ದೇರಳಕಟ್ಟೆ ಸೆಕ್ಟರ್ ವತಿಯಿಂದ ದೇರಳಕಟ್ಟೆ ನವಾಝ್ ಕಾಂಪ್ಲೆಕ್ಸ್ ನಲ್ಲಿ 140ನೇ ಶಿಬಿರ, ಕಡಬ ಸೆಕ್ಟರ್ ವತಿಯಿಂದ ಕಡಬ ಅಂಬೇಡ್ಕರ್ ಭವನದಲ್ಲಿ 141ನೇ ಶಿಬಿರವು ಬೆಳಗ್ಗೆ 9 ಗಂಟೆಗೆ ನಡೆಯಲಿದೆ ಎಂದು ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋ ಅಧ್ಯಕ್ಷ ತೌಸೀಫ್ ಸ‌ಅದಿ ಹರೇಕಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News