×
Ad

ಕುದ್ರೋಳಿ: ಒಳಚರಂಡಿ ಕಾಮಗಾರಿಯ ಗುಂಡಿಗೆ ಬಿದ್ದ ವೃದ್ಧೆ; ಸ್ಥಳೀಯರಿಂದ ರಕ್ಷಣೆ

Update: 2020-02-08 15:52 IST

ಮಂಗಳೂರು, ಫೆ.8: ನಗರದ ಕುದ್ರೋಳಿ ಉರ್ದು ಶಾಲೆಯ ಬಳಿಯ ಮುಖ್ಯ ರಸ್ತೆಯ ಪಕ್ಕ ನಡೆಯುತ್ತಿದ್ದ ಒಳಚರಂಡಿ ಕಾಮಗಾರಿಯ ಸಂದರ್ಭ ವೃದ್ಧೆಯೊಬ್ಬರು ಗುಂಡಿಗೆ ಬಿದ್ದು ಗಾಯಗೊಂಡ ಘಟನೆ ಶನಿವಾರ ನಡೆದಿದೆ.

ಈ ಕಾಮಗಾರಿ ನಡೆಯುವ ರಸ್ತೆಯನ್ನು ಪ್ರವೇಶಿಸುವ ದ್ವಾರದಲ್ಲಿ ಬ್ಯಾರಿಕೇಡ್ ಅಳವಡಿಸಿ ಅತ್ತ ಹೋಗದಂತೆ ರಸ್ತೆ ಬ್ಲಾಕ್ ಮಾಡಲಾಗಿತ್ತು. ಆದರೆ ಇದು ತಿಳಿಯದೆ ಅವರು ಅದೇ ಸ್ಥಳದಲ್ಲಿ ನಡೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಈ ಸಂದರ್ಭ ಆಕಸ್ಮಿಕವಾಗಿ ಗುಂಡಿಗೆ ಬಿದ್ದಿದ್ದಾರೆ. ಘಟನೆಯಿಂದ ಮಹಿಳೆಗೆ ಗಾಯಗಳಾಗಿದ್ದು, ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ಅವರನ್ನು ರಕ್ಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News