ಬೋಳಿಯಾರ್ : ಫೆ. 14ರಂದು ಸಿಎಎ, ಎನ್ಆರ್ ಸಿ ವಿರುದ್ಧ ಪ್ರತಿಭಟನಾ ಸಭೆ
ಮಂಗಳೂರು : ಸಂವಿಧಾನ ಸಂರಕ್ಷಣಾ ಸಮಿತಿ ಬೋಳಿಯಾರು ವತಿಯಿಂದ ಫೆ.14ರಂದು ಸಿಎಎ, ಎನ್ಆರ್ ಸಿ ಹಾಗೂ ಎನ್ ಪಿಆರ್ ಕಾಯ್ದೆ ವಿರುದ್ಧ ಡಾ.ಬಿ.ಆರ್.ಅಂಬೇಡ್ಕರ್ ವೇದಿಕೆಯಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ.
ಫೆ.14ರಂದು ಮಧ್ಯಾಹ್ನ 2:30ಕ್ಕೆ ಪ್ರಾರಂಭವಾಗಲಿದ್ದು ಸಮಿತಿಯ ಸಂಚಾಲಕರಾದ ಹಾಜಿ ಟಿ ಎಚ್ ಲತೀಫ್ ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದು ಅಮ್ಮೆಂಬಳ ಜಾರದಗುಡ್ಡೆ ಜುಮಾ ಮಸೀದಿಯ ಅಮೀರ್ ಅಸ್ಸಖಾಫ್ ತಂಙಳ್ ಪ್ರಾರ್ಥನೆ ನೆರವೇರಿಸಲಿರುವರು. ಉದ್ಘಾಟನೆಯನ್ನು ಬೋಳಿಯಾರು ಜುಮಾ ಮಸೀದಿಯ ಖತೀಬ್ ಅಬ್ದುಲ್ ಖಾದರ್ ಅಶ್ಶಾಫಿ ಮಾಡಲಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ಬಿ.ಆರ್.ಭಾಸ್ಕರ್ ಪ್ರಸಾದ್, ಕಾಂಗ್ರೆಸ್ ವಕ್ತಾರರಾದ ವಿ.ಎಸ್. ಉಗ್ರಪ್ಪ, ಜನತಾದಳದ ನಾಯಕ ಎಮ್ ಬಿ ಸದಾಶಿವ, ಸಿಪಿಐಎಂ ನಾಯಕ ಸುನೀಲ್ ಕುಮಾರ್ ಬಜಾಲ್ ,ಎಸ್ಡಿಪಿಐ ನಾಯಕ ಅಶ್ರಫ್ ಮಾಚಾರ್, ಸಮಸ್ತ ನಾಯಕರಾದ ಎಸ್.ಬಿ.ದಾರಿಮಿ ಹಾಗೂ ಎಸ್ಸೆಸ್ಸೆಫ್ ನಾಯಕ ಸುಫ್ಯಾನ್ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಶಾಸಕ ಯುಟಿ ಖಾದರ್, ಇಬ್ರಾಹಿಂ ಖಲೀಲ್ ತಲಪಾಡಿ , ಪ್ರಶಾಂತ್ ಕಾಜವ ಮಿತ್ತಕೋಡಿ, ಶಾಫಿ ಹಾಜಿ ಹಾಗೂ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿರುವರು ಎಂದು ಸಂವಿಧಾನ ಸಂರಕ್ಷಣಾ ಸಮಿತಿ ಬೋಳಿಯಾರು ಇದರ ಸಂಚಾಲಕ ಹಾಜಿ ಟಿ.ಎಚ್. ಲತೀಫ್ ತಿಳಿಸಿದ್ದಾರೆ.