ಮಾರಿಪ್ಪಳ್ಳ: ಫೆ 9ರಂದು ಜಾಮಿಯಾ ಇರ್ಫಾನಿಯ ಪ್ರಚಾರ ಸಮಾವೇಶ

Update: 2020-02-08 12:24 GMT

ಫರಂಗಿಪೇಟೆ, ಫೆ. 8: ಜಾಮಿಯಾ ಇರ್ಫಾನಿಯ ಚಪ್ಪಾರಪಡವು ಇದರ 28ನೇ ವಾರ್ಷಿಕ ಮಹಾಸಮ್ಮೇಳನ ಹಾಗೂ 20ನೇ ಸನದುದಾನ ಕಾರ್ಯಕ್ರಮ ಫೆ 20 ರಿಂದ 24ರವರೆಗೆ ನಾಲ್ಕು ದಿವಸಗಳ ಕಾಲ ಚಪ್ಪರಪಡವಿನಲ್ಲಿ ನಡೆಯಲಿದೆ.

ಈ ಸಮಾವೇಶದ ಪ್ರಚಾರ ಸಭೆ ಫೆ 9 ರಂದು ಮೌಲ ಮೆಮೋರಿಯಲ್ ಅಕಾಡಮಿ ಪೇರಿಮಾರ್ ಪುದುವಿನಲ್ಲಿ ನಡೆಯಲಿದೆ. ಸಮಸ್ತ ಕೇರಳ ಸುನ್ನಿ  ಯುವಜನ ಸಂಘದ ಕೇಂದ್ರ ಸಮಿತಿ ಕಾರ್ಯದರ್ಶಿ ಅಬ್ದುಲ್ ಹಮೀದ್ ಫೈಝಿ ಅಂಬಲಕಡವು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News