ಅಳೇಕಲ: ಫೆ. 12ರಿಂದ ಮುಹಿಯುದ್ದೀನ್ ರಾತೀಬ್, ವಾರ್ಷಿಕ ದ್ಸಿಕ್ರ್ ಹಲ್ಕಾ ಕಾರ್ಯಕ್ರಮ
Update: 2020-02-08 18:01 IST
ಉಳ್ಳಾಲ: ಅಲ್ ಮಸ್ಜಿದುಲ್ ಜಾಮಿಉಲ್ ಅಮೀನ್ ಅಳೇಕಲ ಉಳ್ಳಾಲ ಇದರ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಮುಹಿಯುದ್ದೀನ್ ರಾತೀಬ್ ಮತ್ತು ವಾರ್ಷಿಕ ದ್ಸಿಕ್ರ್ ಹಲ್ಕಾ ಕಾರ್ಯಕ್ರಮವು ಫೆ. 12ರಿಂದ 16ರವರೆಗೆ ನಡೆಯಲಿದೆ.
ಫೆ. 12ರಂದು ಅಸರ್ ನಮಾಝ್ ಬಳಿಕ ದ್ವಜಾರೋಹಣ, ಫೆ. 13 ರಂದು ವಾರ್ಷಿಕ ದ್ಸಿಕ್ರ್, ಫೆ. 14ರಿಂದ ಪ್ರಭಾಷಣ ಕಾರ್ಯಕ್ರಮ ನಡೆಯಲಿದೆ ಎಂದು ಪ್ರ. ಕಾರ್ಯದರ್ಶಿ ಫಾರೂಕ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.