ವುಹಾನ್‌ನಲ್ಲಿ ಅಮೆರಿಕ ಪ್ರಜೆ ಕೊರೋನವೈರಸ್‌ಗೆ ಬಲಿ

Update: 2020-02-08 14:53 GMT
file photo

ಬೀಜಿಂಗ್, ಫೆ. 8: ಚೀನಾದ ಕೊರೋನವೈರಸ್ ಸೋಂಕಿನ ಕೇಂದ್ರ ಬಿಂದುವಾಗಿರುವ ವುಹಾನ್ ನಗರದಲ್ಲಿ ಅಮೆರಿಕದ ನಾಗರಿಕರೊಬ್ಬರು ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ ಎಂದು ಇಲ್ಲಿನ ಅಮೆರಿಕ ರಾಯಭಾರ ಕಚೇರಿ ಶನಿವಾರ ತಿಳಿಸಿದೆ. ಇದು ಚೀನಾದಲ್ಲಿ ವರದಿಯಾದ ವಿದೇಶಿ ವ್ಯಕ್ತಿಯೊಬ್ಬರ ಮೊದಲ ಸಾವು ಎನ್ನಲಾಗಿದೆ.

‘‘ಕೊರೋನವೈರಸ್ ಸೋಂಕಿಗೆ ಒಳಗಾಗಿದ್ದ 60 ವರ್ಷದ ಅಮೆರಿಕದ ಪ್ರಜೆಯೊಬ್ಬರು ವುಹಾನ್‌ನಲ್ಲಿರುವ ಆಸ್ಪತ್ರೆಯೊಂದರಲ್ಲಿ ಫೆಬ್ರವರಿ 6ರಂದು ಮೃತಪಟ್ಟಿದ್ದಾರೆ ಎನ್ನುವುದನ್ನು ನಾವು ಖಚಿತಪಡಿಸುತ್ತೇವೆ’’ ಎಂದು ರಾಯಭಾರ ಕಚೇರಿಯ ವಕ್ತಾರರೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು. ಆದರೆ, ಮೃತಪಟ್ಟ ವ್ಯಕ್ತಿಯ ಬಗ್ಗೆ ವಿವರಗಳನ್ನು ನೀಡಲಿಲ್ಲ.

ಕೊರೋನವೈರಸ್ ಕಾಯಿಲೆಯಿಂದಾಗಿ ಚೀನಾದ ಹೊರಗಡೆ ಇಬ್ಬರು ಮೃತಪಟ್ಟಿರುವುದು ವರದಿಯಾಗಿದೆ. ಫಿಲಿಪ್ಪೀನ್ಸ್‌ನಲ್ಲಿ ವುಹಾನ್ ನಗರದ ವ್ಯಕ್ತಿಯೊಬ್ಬರು ಮೃತಪಟ್ಟರೆ, ಹಾಂಕಾಂಗ್‌ನಲ್ಲಿ 39 ವರ್ಷದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News