ಚೀನಾಕ್ಕೆ, ಅಲ್ಲಿನ ಜನರಿಗೆ ಕಳಂಕ ಅಂಟಿಕೊಳ್ಳದಂತೆ ಕೊರೋನವೈರಸ್‌ಗೆ ಹೆಸರು

Update: 2020-02-08 14:52 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಫೆ. 8: ಕೊರೋನವೈರಸ್ ಸೋಂಕಿನ ಆಡುಂಬೊಲವಾಗಿರುವ ವುಹಾನ್ ನಗರಕ್ಕೆ ಅಥವಾ ಚೀನಿ ಜನರಿಗೆ ಯಾವುದೇ ಕಳಂಕ ಅಂಟಿಕೊಳ್ಳದಂತೆ ನೂತನ ವೈರಸ್‌ಗೆ ಹೆಸರು ಇಡುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಜಾಗರೂಕತೆಯಿಂದ ಪರಿಶೀಲಿಸುತ್ತಿದೆ.

ನೂತನ ಕೊರೋನವೈರಸ್ ಕಾಯಿಲೆಗೆ ವಿಶ್ವ ಆರೋಗ್ಯ ಸಂಸ್ಥೆ ಇಟ್ಟಿರುವ ಈಗಿನ ಅಧಿಕೃತ ತಾತ್ಕಾಲಿಕ ಹೆಸರು ‘2019-ಎನ್‌ಸಿಒವಿ ಅಕ್ಯೂಟ್ ರೆಸ್ಪಿರೇಟರಿ ಡಿಸೀಸ್’.

2019 ಡಿಸೆಂಬರ್ 31ರಂದು ರೋಗವನ್ನು ಮೊದಲ ಬಾರಿಗೆ ಗುರುತಿಸಲಾಯಿತು. ಹಾಗಾಗಿ ಅದರಲ್ಲಿ ‘2019’ ಕಾಣಿಸಿಕೊಂಡಿದೆ. ‘ಎನ್‌ಸಿಒವಿ’ ಎಂದರೆ ‘ನೋವೆಲ್ ಕೊರೋನವೈರಸ್’.

 ‘‘ಯಾವುದೇ ಸ್ಥಳದ ಹೆಸರು ಬೆಸೆದುಕೊಳ್ಳದ ಮಧ್ಯಂತರ ಹೆಸರೊಂದನ್ನು ವೈರಸ್‌ಗೆ ಇಡುವುದು ಅಗತ್ಯ ಎಂದು ನಾವು ಭಾವಿಸಿದೆವು’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹೊಸ ಕಾಯಿಲೆಗಳ ಘಟಕದ ಮುಖ್ಯಸ್ಥೆ ಮರಿಯಾ ವಾನ್ ಕೆರ್ಖೋವ್ ಸಂಸ್ಥೆಯ ಕಾರ್ಯಕಾರಿ ಮಂಡಳಿಗೆ ಶುಕ್ರವಾರ ತಿಳಿಸಿದರು.

ವೈರಸ್‌ನ ಹೆಸರಿಗೆ ಸಂಬಂಧಿಸಿ ಅಂತಿಮ ನಿರ್ಧಾರವೊಂದು ಕೆಲವೇ ದಿನಗಳಲ್ಲಿ ಹೊರಬೀಳುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News