ಕೊರೋನವೈರಸ್ ಎದುರಿಸಲು 715 ಕೋಟಿ ರೂ. ಘೋಷಿಸಿದ ಅಮೆರಿಕ

Update: 2020-02-08 15:02 GMT

ವಾಶಿಂಗ್ಟನ್, ಫೆ. 8: ವೇಗವಾಗಿ ಹರಡುತ್ತಿರುವ ಮಾರಕ ಕೊರೋನವೈರಸ್ ವಿರುದ್ಧ ಹೋರಾಡುವುದಕ್ಕಾಗಿ ಚೀನಾ ಮತ್ತು ಇತರ ಪೀಡಿತ ದೇಶಗಳಿಗೆ 100 ಮಿಲಿಯ ಡಾಲರ್ (ಸುಮಾರು 715 ಕೋಟಿ ರೂಪಾಯಿ) ನೆರವು ನೀಡುವುದಾಗಿ ಅಮೆರಿಕ ಶುಕ್ರವಾರ ಘೋಷಿಸಿದೆ.

‘‘ಇದು ಹಾಗೂ ಅಮೆರಿಕದ ಖಾಸಗಿ ಕ್ಷೇತ್ರವು ಉದಾರವಾಗಿ ನೀಡಿರುವ ನೂರಾರು ಮಿಲಿಯ ಡಾಲರ್ ದೇಣಿಗೆಯು, ರೋಗ ಸ್ಫೋಟಕ್ಕೆ ಸಂಬಂಧಿಸಿ ಅಮೆರಿಕದ ಬಲಿಷ್ಠ ನಾಯಕತ್ವ ಗುಣವನ್ನು ಪ್ರದರ್ಶಿಸುತ್ತದೆ’’ ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ನಮ್ಮ ಬದ್ಧತೆಗೆ ಸರಿಸಾಟಿಯಾಗುವಂತೆ ನಾವು ಜಗತ್ತನ್ನು ಪ್ರೋತ್ಸಾಹಿಸುತ್ತೇವೆ. ನಾವು ಜೊತೆಯಾಗಿ ಕೆಲಸ ಮಾಡಿದರೆ ಹೆಚ್ಚುತ್ತಿರುವ ಬೆದರಿಕೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಬಹುದು’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News