ಧಾರ್ಮಿಕ ಮೆರವಣಿಗೆಯಲ್ಲಿ ಪಟಾಕಿ ಸ್ಫೋಟ; ಕನಿಷ್ಠ ಇಬ್ಬರು ಬಲಿ

Update: 2020-02-08 16:34 GMT

ಚಂಡೀಗಢ,ಫೆ.7: ಪಂಜಾಬ್‌ನ ತರಣ್‌ ತರಾಣ್ ಜಿಲ್ಲೆಯಲ್ಲಿ ಶನಿವಾರ ಧಾರ್ಮಿಕ ಮೆರವಣಿಗೆಯೊಂದರಲ್ಲಿ ಪಟಾಕಿ ಸ್ಫೋಟಿಸಿದ್ದರಿಂದ ಸಂಭವಿಸಿದ ದುರಂತದಲ್ಲಿ ಕನಿಷ್ಠ ಇಬ್ಬರು ಮೃತಪಟ್ಟು, ಹದಿನೈದಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

  ತರಣ್‌ತರಣ್ ಜಿಲ್ಲೆಯ ಪಾಹು ಗ್ರಾಮದಲ್ಲಿ ಶನಿವಾರ ನಗರ ಕೀರ್ತನೆ ಧಾರ್ಮಿಕ ಕಾರ್ಯಕ್ರಮದ ವೇಳೆ ಭಾರೀ ಪ್ರಮಾಣದ ಪಟಾಕಿಗಳನ್ನು ಟ್ರ್ಯಾಕ್ಟರ್‌ನ ಟ್ರಾಲಿಯಲ್ಲಿ ಸಾಗಿಸುತ್ತಿದ್ದಾಗ ಅವು ಸ್ಫೋಟಿಸಿದವೆಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ ದುರಂತದಲ್ಲಿ ಹಲವಾರು ತೀವ್ರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಬಗ್ಗೆ ಭೀತಿ ವ್ಯಕ್ತವಾಗಿದೆ.

   ಸ್ಫೋಟದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿರುವುದಾಗಿ ಪಂಜಾಬ್‌ನ ಪೊಲೀಸ್ ಮಹಾನಿರೀಕ್ಷಕ (ಗಡಿವಲಯ) ಎಸ್‌ಪಿ ಪರಮಾರ್ ತಿಳಿಸಿದ್ದಾರೆ. ಮೆರವಣಿಗೆಯಲ್ಲಿ ಜನರು ಪಟಾಕಿಗಳನ್ನು ಸಿಡಿಸುತ್ತಿದ್ದರು. ಆಗ ಪಟಾಕಿಗಳ ಬೆಂಕಿಯ ಕಿಡಿ ಪಟಾಕಿಗಳ ದಾಸ್ತಾನಿದ್ದ ಟ್ರ್ಯಾಕ್ಟರ್-ಟ್ರಾಲಿಯ ಮೇಲೆ ಬಿದ್ದುದರಿಂದ ಭಾರೀ ಸ್ಫೋಟ ಸಂಭವಿಸಿತೆಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News