ಟೂರಿಸ್ಟ್ ಬೋಟುಗಳ ಸೊತ್ತು ಕಳವು

Update: 2020-02-08 16:45 GMT

ಮಲ್ಪೆ, ಫೆ.8: ಮಲ್ಪೆ ಬೀಚ್‌ನ ಟೂರಿಸ್ಟ್ ಬೋಟುಗಳಲ್ಲಿದ್ದ ಪೆಟ್ರೋಲ್ ಸೇರಿದಂತೆ ಸಾವಿರಾರು ರೂ. ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

 ಮಲ್ಪೆಯ ಪ್ರಕಾಶ್ ಆಚಾರ್ಯ ಬೋಟ್ ಬಿಲ್ಡಿಂಗ್ ಬಳಿ ಫೆ.5ರಂದು ರಾತ್ರಿ ವೇಳೆ ಲಂಗರು ಹಾಕಿದ್ದ ನೀಲಾಧರ್ ಕೋಟ್ಯಾನ್ ಎಂಬವರ ಟೂರಿಸ್ಟ್ ಬೋಟ್‌ನಲ್ಲಿದ್ದ 70 ಲೀಟರ್ ಸೀಮೆಎಣ್ಣೆ, 20 ಲೀಟರ್ ಪೆಟ್ರೋಲ್ ಹಾಗೂ 9,000ರೂ. ಮೌಲ್ಯದ ಸ್ಪೇರ್‌ಪಾರ್ಟ್ಸ್ ಮತ್ತು ಇನ್ನೊಂದು ಬೋಟಿನಲ್ಲಿದ್ದ 15 ಲೀಟರ್ ಪೆಟ್ರೋಲ್, 60ಲೀಟರ್ ಸೀಮೆಎಣ್ಣೆ ಹಾಗೂ 10,000ರೂ. ಮೌಲ್ಯದ ಸ್ಟೇರ್‌ಪಾರ್ಟ್‌ಗಳನ್ನು ಕಳವುಗೈದಿದ್ದಾರೆ.

ಇವುಗಳ ಒಟ್ಟು ಮೌಲ್ಯ 25,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News