ಗ್ರಾಹಕರ ಸೋಗಿನಲ್ಲಿ ಹಣ ಕಳವು
Update: 2020-02-08 22:16 IST
ಉಡುಪಿ, ಫೆ.8: ಕುಂಜಿಬೆಟ್ಟುವಿನ ಮ್ಯಾಟ್ರಿಕ್ಸ್ ಅಟೋ ವೆಂಚರ್ಸ್ ದ್ವಿಚಕ್ರ ಶೋರೂಂಗೆ ಗ್ರಾಹಕರ ಸೋಗಿನಲ್ಲಿ ಬಂದ ಅಪರಿಚಿತರು ಸಾವಿರಾರು ರೂ. ಹಣ ಕಳವು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜ.28ರಂದು ಸಂಜೆ ವೇಳೆ ಶೋರೂಂಗೆ ಬಂದ ಇಬ್ಬರು ಅಪರಿಚಿತರು ಬೈಕ್ ಖರೀದಿ ಹಾಗೂ ಡಾಲರ್ ವಿನಿಮಯ ಮಾಡುವ ನೆಪದಲ್ಲಿ ಅಕೌಂಟ್ಸ್ ಮ್ಯಾನೇಜರ್ ಸಂಪತ್ ಕುಮಾರ್ ಅವರ ಗಮನವನ್ನು ಬೇರೆ ಕಡೆಗೆ ಸೆಳೆದು ಒಟ್ಟು 26,000ರೂ. ಮೊತ್ತದ 2,000ರೂ. ಮುಖಬೆಲೆಯ 13 ನೋಟು ಗಳನ್ನು ಕಳವು ಮಾಡಿರುವುದಾಗಿ ದೂರಲಾಗಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.