ಗಾಂಜಾ ಸೇವನೆ: ಮೂವರು ವಶಕ್ಕೆ

Update: 2020-02-08 16:47 GMT

ಮಣಿಪಾಲ, ಫೆ.8: ಗಾಂಜಾ ಸೇವಿಸಿ ಮಣಿಪಾಲ ಪೊಲೀಸ್ ಠಾಣೆಗೆ ಭೇಟಿ ನೀಡಿದ ಮೂವರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಜ.25ರಂದು ಮಣಿಪಾಲ ವಿದ್ಯಾರತ್ನನಗರದ ಕೇವಿನ್ ವರ್ಗಿಸ್(21), ಜ.26ರಂದು ವಿದ್ಯಾರತ್ನ ನಗರದ ವಿಘ್ನೇಶ್ವರ್(23) ಮತ್ತು ಬೆಂಗಳೂರು ಜೆ.ಪಿ.ನಗರದ ಲೇನಿ ರಾಬಿನ್(23) ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ಮಣಿಪಾಲ ಕೆಎಂಸಿ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸಿದ್ದು ಅವರನ್ನು ಪರೀಕ್ಷಿಸಿದ ವೈದ್ಯರು ಇವರೆಲ್ಲ ಗಾಂಜಾ ಸೇವಿಸಿರುವ ಬಗ್ಗೆ ದೃಢ ಪತ್ರವನ್ನು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News