×
Ad

ಫೆ.9ರಂದು ವಿದ್ಯಾಗಿರಿಯಲ್ಲಿ ಅಮರನಾಥ ಶೆಟ್ಟಿ ಉತ್ತರಕ್ರಿಯೆ

Update: 2020-02-08 23:24 IST

ಮೂಡುಬಿದಿರೆ: ಮಾಜಿ ಸಚಿವ ದಿ. ಕೆ.ಅಮರನಾಥ ಶೆಟ್ಟಿ ಅವರ ಉತ್ತರ ಕ್ರಿಯೆ, ಶ್ರದ್ಧಾಂಜಲಿ ಸಭೆ ಹಾಗೂ ಸಹಭೋಜನ ವಿದ್ಯಾಗಿರಿಯ ಆಳ್ವಾಸ್ ಕ್ಯಾಂಪಸ್‍ನ ನುಡಿಸಿರಿ ವೇದಿಕೆಯಲ್ಲಿ ಫೆ.9ರಂದು ಮಧ್ಯಾಹ್ನ 11.45 ರಿಂದ ನಡೆಯಲಿದೆ.

ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಡೆ, ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ವಿನಯ್ ಹೆಗ್ಡೆ ತೇಜಸ್ವಿನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಶಾಂತಾರಾಮ್ ಶೆಟ್ಟಿ ಭಾಗವಹಿಸಲಿದ್ದಾರೆ. ಸಭೆಯ ಬಳಿಕ 12.30ಕ್ಕೆ ಸಹಭೋಜನ ನಡೆಯಲಿದೆ ಎಂದು ಕೆ.ಅಮರನಾಥ ಶೆಟ್ಟಿ ಶ್ರದ್ಧಾಂಜಲಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News