ರಾಷ್ಟ್ರೀಯ ಯುವ ಸೈನಿಕ ದಳದಿಂದ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಉತ್ತಮ ಶಿಕ್ಷಣ ಸಂಸ್ಥೆ ಪ್ರಶಸ್ತಿ

Update: 2020-02-08 18:08 GMT

ಮೂಡುಬಿದಿರೆ: ರಾಷ್ಟ್ರೀಯ ಯುವ ಸೈನಿಕ ದಳದ ಕರ್ನಾಟಕ ಹಾಗೂ ಗೋವ ಡೈರಕ್ಟರೇಟ್‍ ವತಿಯಿಂದ ಆಳ್ವಾಸ್ ಶಿಕ್ಷಣ ಸಂಸ್ಥೆಗೆ 2019-20ನೇ ಸಾಲಿನ ಉತ್ತಮ ಶಿಕ್ಷಣ ಸಂಸ್ಥೆ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 

ಈ ಪ್ರಶಸ್ತಿಯನ್ನು ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಂಟಿಂಜೆಂಟ್‍ಗಳನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಏರ್ ಕಮಾಂಡರ್ ಲಲಿತ್ ಕುಮಾರ್ ಜೈನ್ ಅವರು ಹದಿನೆಂಟನೆ ಕರ್ನಾಟಕ ಬೆಟಾಲಿಯನ್ ಮಂಗಳೂರು ಇದರ ಕಮಾಂಡಿಗ್ ಆಫೀಸರ್ ಆಗಿರುವ ಮನೋಜ್ ಕುಮಾರ್ ವಿ.ಯು., ಎನ್.ಸಿ.ಸಿ ಆಫಿಸರ್ ಕ್ಯಾಪ್ಟನ್ ಡಾ. ರಾಜೇಶ್ ಬಿ. ಹಾಗೂ ಕೆಡೆಟ್ ಜೂನಿಯರ್ ಅಂಡರ್ ಆಫೀಸರ್ ಹಾಗೂ 2020 ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪಾಲ್ಗೊಂಡ  ವೈಷ್ಣವಿ ಗೋಪಲ್ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

ಆಳ್ವಾಸ್ ಶಿಕ್ಷಣ ಸಂಸ್ಥೆಯು ಎನ್.ಸಿ.ಸಿ ವಿದ್ಯಾರ್ಥಿಗಳನ್ನು ಉತ್ತೇಜಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.  ಈ ಪ್ರಶಸ್ತಿಯು ರಾಷ್ಟ್ರೀಯ ಮಟ್ಟದ ಕ್ಯಾಂಪ್‍ಗಳಾದ ಆರ್.ಡಿ.ಸಿ, ಟಿ.ಎಲ್.ಸಿ, ಏಕೀಕರಣ ಕ್ಯಾಂಪ್, ಆರ್ಮಿ ಅಟಾಚ್‍ಮೆಂಟ್ ಕ್ಯಾಂಪ್, ನಾಯಕತ್ವ ಕ್ಯಾಂಪ್‍ಗಳಲ್ಲಿ ಕೆಡೆಟ್‍ಗಳ ಸಮರ್ಪಕವಾದ ಭಾಗವಹಿಸುವಿಕೆ ಮತ್ತು ಸಾಮಾಜಿಕ ಕೆಲಸಗಳಲ್ಲಿ ವಿದ್ಯಾರ್ಥಿಗಳ ಸೇವೆಯನ್ನು  ಗಣನೆಗೆ ತೆಗೆದುಕೊಳ್ಳಲಾಗಿದೆ. ಎನ್.ಸಿ.ಸಿ ಕೆಡೆಟ್ ಹಾಗೂ ಅಧಿಕಾರಿಗಳ ಕಾರ್ಯದಕ್ಷತೆ, ಹಳೇ ವಿದ್ಯಾರ್ಥಿಗಳ ಉತ್ತಮ ಕೆಲಸ, ರಕ್ಷಣಾ ಪಡೆಯಲ್ಲಿ ಕೆಡೆಟ್ ಗಳು ಪಡೆದ ವಿವಿಧ ಸ್ಥಾನಗಳ ಗಣನೆ ತೆಗೆದು ಕೊಂಡಿದೆ. ಇದರೊಂದಿಗೆ ಈ ಬಾರಿ ಆಳ್ವಾಸ್ ಶಿಕ್ಷಣ ಸಂಸ್ಥೆ ಮಂಗಳೂರು ಮಟ್ಟದ ಕೆಡೆಟ್ ಗಳಿಗೆ 5 ಎನ್.ಸಿ.ಸಿ ಕ್ಯಾಂಪ್‍ಗಳನ್ನು ಆಯೋಜಿಸಿತ್ತು. ಅಲ್ಲದೆ ಗಣರಾಜ್ಯೋತ್ಸವದ ಅಂಗವಾಗಿ ನಾಯಕತ್ವ ಶಿಬಿರವನ್ನು ಆಯೋಜಿಸಿದ್ದು ಸುಮಾರು 1800 ಕೆಡೆಟ್ ಗಳು ಭಾಗವಹಿಸಿದ್ದರು. ಈ ಮೊದಲು ಆಳ್ವಾಸ್ 4 ಭಾರಿ ಉತ್ತಮ ಶಿಕ್ಷಣ ಸಂಸ್ಥೆ ಪ್ರಶಸ್ತಿಯನ್ನು ಪಡೆದಿದೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅದ್ಯಕ್ಷ ಡಾ ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಅಭಿನಂದಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News