×
Ad

​ಮಂಗಳೂರು: ರೆಲಿಶ್ ಆಹಾರೋತ್ಸವ

Update: 2020-02-08 23:41 IST

ಮಂಗಳೂರು, ಫೆ.8: ನಗರದ ಮಿಲಾಗ್ರಿಸ್ ಕಾಲೇಜ್ ಮತ್ತು ರಾಜ್ಯ ಗೋಡಂಬಿ ಉತ್ಪಾದಕರ ಸಂಘದ ವತಿಯಿಂದ ಶನಿವಾರ ಮಿಲಾಗ್ರಿಸ್ ಕಾಲೇಜು ಆವರಣದಲ್ಲಿ "ರೆಲಿಶ್ ಆಹಾರೋತ್ಸವ" ವು ಆರಂಭಗೊಂಡಿತು.

ರವಿವಾರ ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಆಹಾರೋತ್ಸವ ನಡೆಯಲಿದೆ. ಮನೆಯಲ್ಲೇ ಗೋಡಂಬಿ ಬೆರೆಸಿ ತಯಾರಿಸಿದ ವಿವಿಧ ಖಾದ್ಯ ತೈಲಗಳನ್ನು ಸಾರ್ವಜನಿಕರು ಆಹಾರೋತ್ಸವದಲ್ಲಿ ಪ್ರದರ್ಶನಕ್ಕಿಟ್ಟರು.

ಈ ಸಂದರ್ಭ ಗೋಡಂಬಿ ತಯಾರಕರ ಸಂಘದ ಅಧ್ಯಕ್ಷ ಪಿ.‌ಸುಬ್ರಾಯ ಪೈ, ಮಾಜಿ ಅಧ್ಯಕ್ಷ ವಾಲ್ಟರ್ ಡಿಸೋಜ, ಓಶಿಯನ್ ಪರ್ಲ್ ಹೊಟೇಲಿನ ಎಕ್ಸಿಕ್ಯುಟಿವ್ ಚೀಫ್ ಜೆ. ಮಂದಾಲ್, ಮಿಲಾಗ್ರಿಸ್ ಕಾಲೇಜಿನ ಕರೆಸ್ಪಾಂಡೆಂಟ್ ಫಾ. ಜೋಸೆಫ್ ಡಿಸೋಜ, ಪ್ರಾಂಶುಪಾಲ ಫಾ. ಮೈಕಲ್ ಎಲ್. ಸಂತಮಯೋರ್, ಡೆಂಜಿಲ್ ಸೆಲೆಸ್ಟಿನ್ ಡಿಕಾಸ್ತ, ಲವೀನಾ ಲೋಬೋ,ರುಫಾಸ್ ವಾಲ್ಟರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News