ಧರ್ಮಸ್ಥಳದಿಂದ 40 ನಿಮಿಷದಲ್ಲಿ ಹೃದಯ ರೋಗಿಯನ್ನು ಮಂಗಳೂರು ತಲುಪಿಸಿದ ಆಪತ್ಬಾಂಧವ ಹಮೀದ್

Update: 2020-02-09 06:16 GMT

ಬೆಳ್ತಂಗಡಿ: ಧರ್ಮಸ್ಥಳಕ್ಕೆ ತೀರ್ಥ ಯಾತ್ರೆಗೆ ಆಗಮಿಸಿದ್ದ ಚಿಕ್ಕಬಳ್ಳಾಪುರದ 40ರ ಹರೆಯದ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ಈಡಾಗಿದ್ದು, ಅವರಿಗೆ ಉಜಿರೆಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ತಕ್ಷಣವೇ ಅವರನ್ನು ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕೊಂಡೊಯ್ಯಬೇಕಾಗಿತ್ತು. ತಡವಾದರೆ ಜೀವಕ್ಕೆ ಅಪಾಯವಿದೆ ಎಂದು ತಿಳಿಸಲಾಗಿತ್ತು.

ಈ ಸಂದರ್ಭ ಮಂಗಳ ಆ್ಯಂಬುಲೆನ್ಸ್ ಚಾಲಕ ಹಮೀದ್ ಆದರ್ಶನಗರ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ತುಂಬಿದ ಟ್ರಾಫಿಕ್ ನಡುವೆಯೂ  ಜೀವನ್ಮರಣ ಹೋರಾಟದಲ್ಲಿದ್ದ ವ್ಯಕಿಯನ್ನು ಕೇವಲ 40 ನಿಮಿಷದಲ್ಲಿ 75 ಕಿ.ಮೀ ಕ್ರಮಿಸಿ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದ್ದಾರೆ.

ಅಷ್ಟರಲ್ಲೇ ಪೂರ್ವ ಸಿದ್ಧತೆ ಮುಗಿಸಿಕೊಂಡು ಕಾಯುತ್ತಿದ್ದ ವೈದ್ಯರು ಅಲ್ಲಿ ಅಗತ್ಯ ಚಿಕಿತ್ಸೆ ನೀಡಿದ್ದು, ಅವರು ಚೇತರಿಸಿಕೊಂಡಿದ್ದಾರೆ. ಆ್ಯಂಬುಲೆನ್ಸ್ ಚಾಲಕನನ್ನು ರೋಗಿಯ ಸಂಬಂಧಿಕರು ಹಾಗು ವೈದ್ಯರು  ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News