×
Ad

ಸಮೀಕ್ಷೆಯಲ್ಲಿ 'ಆಪ್ ಗೆ ಜೈ' ಎಂದ ಮತದಾರ: ದಿಲ್ಲಿ ಜನರ ವಿರುದ್ಧ ಸಿಡಿಮಿಡಿಗೊಂಡ 'ಝೀ ನ್ಯೂಸ್‍'ನ ಸುಧೀರ್ ಚೌಧರಿ

Update: 2020-02-09 16:13 IST

ಹೊಸದಿಲ್ಲಿ: ಪ್ರಧಾನಿ ಮೋದಿಯವರ ಕಟ್ಟಾ ಬೆಂಬಲಿಗ ಎಂದೇ ಗುರುತಿಸಲ್ಪಟ್ಟಿರುವ 'ಝೀ ನ್ಯೂಸ್‍'ನ ನಿರೂಪಕ ಸುಧೀರ್ ಚೌಧರಿ ಶನಿವಾರ ದಿಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾದ ಬಳಿಕ ದಿಲ್ಲಿಯ ಜನರ ಬಗ್ಗೆ ಆಕ್ರೋಶಗೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಚುನಾವಣೋತ್ತರ ಸಮೀಕ್ಷೆಗಳೆಲ್ಲ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರದ ಗದ್ದುಗೆ ಹಿಡಿಯುತ್ತದೆ ಎಂದು ಅಂದಾಜಿಸಿವೆ.

ಸಮೀಕ್ಷೆಗಳು ಪ್ರಕಟವಾಗುತ್ತಿದ್ದಂತೆ ಕೆಂಡಾಮಂಡಲರಾದ ಸುಧೀರ್ ಚೌಧರಿ, "ದೆಹಲಿ ನಾಗರಿಕರು ಬಾಲಕೋಟ್ ವಾಯುದಾಳಿ, ಅಯೋಧ್ಯೆ ರಾಮಮಂದಿರ ಅಥವಾ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಕಿತ್ತುಹಾಕಿದ್ದು ಹೀಗೆ ಯಾವುದನ್ನೂ ಪರಿಗಣಿಸಲಿಲ್ಲ" ಎಂದಿದ್ದಾರೆ.

ಮುಂದುವರಿದು ಮಾತನಾಡಿದ ಅವರು, "ದೇಶ ತುಂಡು ತುಂಡಾಗುವ ಬಗ್ಗೆ ಕೂಡಾ ದಿಲ್ಲಿಯ ಜನತೆಗೆ ಕಾಳಜಿ ಇಲ್ಲ. ತಮ್ಮ ಸ್ಥಳೀಯ ಸಂಕಷ್ಟಗಳ ಬಗ್ಗೆ ಮಾತ್ರ ಅವರಿಗೆ ಕಾಳಜಿ. ರಾಷ್ಟ್ರೀಯ ಮಹತ್ವದ ದೊಡ್ಡ ವಿಷಯಗಳ ಬಗ್ಗೆ ಕಾಳಜಿ ಇಲ್ಲ" ಎಂದರು.

"ದೆಹಲಿಯ ಜನ ಸೋಮಾರಿಗಳು. ತಮ್ಮ ಸ್ಮಾರ್ಟ್‍ ಫೋನ್‍ಗಳ ಮೂಲಕ ಅಭಿಪ್ರಾಯ ಶೇರ್ ಮಾಡಿಕೊಂಡಿದ್ದಾರೆಯೇ ವಿನಃ ಮತ ಚಲಾವಣೆಗೆ ಬಂದಿಲ್ಲ" ಎಂದೂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News