ನಾನು ಉನ್ನತ ಶಿಕ್ಷಣ ಪಡೆದ ವ್ಯಕ್ತಿಯಲ್ಲ: ಹರೇಕಳ ಹಾಜಬ್ಬ
ಉಳ್ಳಾಲ: ನಾನು ಉನ್ನತ ವಿದ್ಯಾಭ್ಯಾಸ ಪಡೆದ ವ್ಯಕ್ತಿಯಲ್ಲಿ. ಮಕ್ಕಳಿಗೆ ಶಿಕ್ಷಣ ಕೊಡಬೇಕೆಂದು ಆಸೆ ಇತ್ತು. ಅದನ್ನು ತನ್ನಿಂದಾದಷ್ಟು ಈಡೇರಿಸಿದ್ದೇನೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಹೇಳಿದರು.
ಎಸ್ಸೆಸ್ಸೆಫ್ ದೇರಳಕಟ್ಟೆ ಸೆಕ್ಟರ್ ವತಿಯಿಂದ ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಬ್ಲಡ್ ಸೈಬೋ ಮತ್ತು ಯೆನೆಪೋಯ ಆಸ್ಪತ್ರೆಯ ಸಹಯೋಗದಲ್ಲಿ ದೇರಳಕಟ್ಟೆ ನವಾಝ್ ಕಾಂಪ್ಲೆಕ್ಸ್ ನಲ್ಲಿ ರವಿವಾರ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದರು.
ರಕ್ತದಾನ ಉತ್ತಮ ಕಾರ್ಯ ಆದರೆ ನಾನು ಅದಕ್ಕೆ ಅರ್ಹನಲ್ಲ. ಆರೋಗ್ಯ ಉತ್ತಮ ಇಲ್ಲದೆ ಕಾರಣ ಸಾಧ್ಯವಾಗುತ್ತಿಲ್ಲ. ಆದರೆ ನನ್ನ ಜೀವನದಲ್ಲಿ ಸಮಾಜಕ್ಕೆ ಇನ್ನಷ್ಟು ಸೇವೆ ನೀಡಲು ತಯಾರಿಯಾಗಿದ್ದೇನೆ. ಯನೆಪೋಯ ಸಂಸ್ಥೆ ನನ್ನ ಕಾರ್ಯಗಳಿಗೆ ಉತ್ತಮ ಸಹಕಾರ ನೀಡಿದೆ ಎಂದರು.
ಮುಖ್ಯ ಭಾಷಣ ಮಾಡಿದ ಮುನೀರ್ ಕಾಮಿಲ್ ಸಖಾಫಿ ಅವರು, ಎದೆಯಲ್ಲಿ ಎರಡು ಅಕ್ಷರ ಇಲ್ಲದ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಈಗ ದೇಶವೇ ಗುರುತಿಸಿದೆ . ಕಿತ್ತಳೆ ಹಣ್ಣು ವ್ಯಾಪಾರಿಯಾಗಿದ್ದ ಅವರು ದೇಶಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಎಸ್ಸೆಸ್ಸೆಫ್ ದೇರಳಕಟ್ಟೆ ಸೆಕ್ಟರ್ ಅಧ್ಯಕ್ಷ ಅಲ್ತಾಫ್ ಶಾಂತಿ ಬಾಗ್ ವಹಿಸಿದ್ದರು.ಇಸ್ಹಾಕ್ ಝುಹ್ ರಿ ದುವಾ ನೆರವೇರಿಸಿದರು.
ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ, ಏಷ್ಯನ್ ಬಾವ ಹಾಜಿ, ಬೆಳ್ಮ ಗ್ರಾ.ಪಂ.ಉಪಾಧ್ಯಕ್ಷ ಸತ್ತಾರ್, ಸದಸ್ಯ ಕಬೀರ್ ದೇರಳಕಟ್ಟೆ, ಖುಬೈಬ್ ತಂಙಳ್, ಬ್ಲಡ್ ಸೈಬೋ ಉಸ್ತುವಾರಿ ಹಕೀಂ ಪೂಮಣ್ಣು, ಕರೀಂ ಕೆದ್ ಕಾರ್, ಜಿ.ಎ.ಇಬ್ರಾಹಿಂ, ಕಬೀರ್ ಸಅದಿ, ತೌಸೀಫ್ ಸಅದಿ ಉಪಸ್ಥಿತರಿದ್ದರು.
ಹಿಫಾಝ್ ಮರ್ಝೂಕಿ ಸ್ವಾಗತಿಸಿದರು. ಮಹಮ್ಮದ್ ಶಾಫಿ ವಂದಿಸಿದರು.