ಮಣಿಪಾಲ ಮ್ಯಾರಥಾನ್: ಕೀನ್ಯಾದ ಸ್ಟೀಫನ್- ನಿಟ್ಟೆಯ ಭೂಮಿಕಾಗೆ ಪ್ರಶಸ್ತಿ

Update: 2020-02-09 15:50 GMT

ಮಣಿಪಾಲ, ಫೆ.9: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ), ಉಡುಪಿ ಜಿಲ್ಲಾ ಅಮೆಚೂರು ಅಥ್ಲೆಟಿಕ್ ಅಸೋಸಿಯೇಷನ್‌ನ ಸಹಯೋಗದೊಂದಿಗೆ ರವಿವಾರ ಮಣಿಪಾಲದಲ್ಲಿ ಆಯೋಜಿಸಲಾದ 42 ಕಿ.ಮೀ. ದೂರದ ಫುಲ್ ಮ್ಯಾರಥಾನ್‌ನಲ್ಲಿ ಕೀನ್ಯಾ ದೇಶದ ಸ್ಟೀಫನ್ ಹಾಗೂ ನಿಟ್ಟೆ ಕಾಲೇಜಿನ ಭೂಮಿಕಾ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

42ಕಿ.ಮೀ. ದೂರವನ್ನು ಪುರುಷರ ವಿಭಾಗದಲ್ಲಿ ಸ್ಟೀಫನ್ 2:33:38 ಗಂಟೆ ಯಲ್ಲಿ ತಲುಪಿದರೆ ಮಹಿಳೆಯರ ವಿಭಾಗದಲ್ಲಿ ಭೂಮಿಕಾ 3:37:09 ಗಂಟೆ ಗಳಲ್ಲಿ ಗುರಿ ತಲುಪಿದರು. ಪುರುಷರ ವಿಭಾಗದಲ್ಲಿ ಕೀನ್ಯಾದ ಜಫೆಟ್ ರೊನ್ನೋ (2:33:40) ದ್ವಿತೀಯ, ಕೀನ್ಯಾದ ಇಸಾಕ್(2:35:40) ತೃತೀಯ ಮತ್ತು ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ದೀಪಿಕಾ ಪ್ರಕಾಶ್(3:55:39) ದ್ವಿತೀಯ, ಬೆಂಗಳೂರಿನ ಪ್ರಿಯಾಂಕ ಎಚ್.ಬಿ.(4:43:07) ತೃತೀಯ ಸ್ಥಾನ ವನ್ನು ಪಡೆದರು.

ಇತರ ವಿಭಾಗಗಳ ಫಲಿತಾಂಶದ ವಿವಿರ ಈ ರೀತಿ ಇದೆ. 42 ಕಿ.ಮೀ. 41-55ರ ಪುರುಷರ ವಿಭಾಗ: ಪ್ರ-ವಿಶ್ವನಾಥ್, ದ್ವಿ- ಸತೀಶ್ ಚಂದ್ರ, ತೃ-ಜಾರ್ಜ್ ವರ್ಗೀಸ್. 56ವರ್ಷ ಮೇಲ್ಪಟ್ಟ ಪುರುಷರ ವಿಭಾಗ: ಪ್ರ-ವಿಶ್ವನಾಥ್ ಶೆಟ್ಟಿ, ದ್ವಿ-ವಿಠಲ್ ಶೆಟ್ಟಿಗಾರ್. 42 ಕಿ.ಮೀ. ಮಾಹೆ ಸಿಬ್ಬಂದಿ ಪುರುಷರ ವಿಭಾಗ: ಪ್ರ-ಸಂದೀಪ್ ಕುಮಾರ್, ದ್ವಿ- ಗಂಗಾಧರ್. ವಿದ್ಯಾರ್ಥಿ ಪುರುಷರ ವಿಭಾಗ: ಪ್ರ-ಅನೀಶ್, ದ್ವಿ- ಅಶಂಕ್. 50ವರ್ಷ ಮೇಲ್ಪಟ್ಟ ಪುರುಷರ ವಿಭಾಗ: ಪ್ರ-ಗಿರೀಶ್ ಮೆನನ್.

21ಕಿ.ಮೀ. ಹಾಫ್ ಮ್ಯಾರಥಾನ್ ಪುರುಷರ ವಿಭಾಗ(18-41 ವಯೋ ಮಿತಿ): ಪ್ರ-ದಿನೇಶ್, ದ್ವಿ- ಪ್ರವೀಣ್, ತೃ-ನಿಕೋಡಮಸ್. ಮಹಿಳೆಯರ ವಿಭಾಗ: ಪ್ರ-ಅರ್ಚನಾ, ದ್ವಿ-ಸಂಧ್ಯಾ ಕೆ.ಜೆ., ತೃ-ಶಾಲಿನಿ. 41-55 ವಯೋಮಿತಿ ಪುರುಷರ ವಿಭಾಗ: ಪ್ರ-ಚಂದ್ರಶೇಖರ್, ದ್ವಿ- ದೀಪಕ್, ತೃ-ಶ್ಯಾಮ್. ಮಹಿಳೆಯರ ವಿಭಾಗ: ಪ್ರ- ರೋಲಿ ಅವಸ್ಥಿ, ದ್ವಿ- ತಪತಿ ಭಟ್ಟಾಚಾರ್ಯ. 56ವರ್ಷ ಮೇಲ್ಪಟ್ಟ ಪುರುಷರ ವಿಭಾಗ: ಪ್ರಜ ಥೆಮಸ್ ಪಿ.ಸಿ., ದ್ವಿ- ರಾಜೀವ ಶೆಟ್ಟಿ.

ಮಾಹೆ 21ಕಿ.ಮೀ. ಪುರುಷರ ವಿಭಾಗ(25-50ವಯೋಮಿತಿ): ಪ್ರ- ಪರೇಶ್, ದ್ವಿ-ಬುಲಾನ್ ಬರೊದೊಲಿ. ಮಹಿಳೆಯರ ವಿಭಾಗ: ಡಾ. ಸಹಾನ, ದ್ವಿ-ಡಾ.ಪ್ರಮೀಳಾ. 50ವರ್ಷ ಮೇಲ್ಪಟ್ಟ ಪುರುಷರ ವಿಭಾಗ: ಪ್ರ- ಅರುಣ್ ಶಾನುಭಾಗ್, ದ್ವಿ- ಪ್ರಶಾಂತ್. ಮಹಿಳೆಯರ ವಿಭಾಗ: ಪ್ರ-ಸುಧಾ ಮೆನನ್. ವಿದ್ಯಾರ್ಥಿ ವಿಭಾಗ(ಪುರುಷರ): ಪ್ರ-ಶಾಶಂಕ್, ದ್ವಿ-ಸ್ಯಾಮ್ ಜೆರಾಲ್ಡ್. ಮಹಿಳೆಯರ ವಿಭಾಗ: ಪ್ರ- ಶರ್ಮನಿ, ದ್ವಿ- ಸೌಮ್ಯ ಭಗತ್.

 3ಕಿ.ಮೀ: ಪ್ರಾಥಮಿಕ ಶಾಲೆ(ಬಾಲಕರು): ಪ್ರ-ಶರತ್, ದ್ವಿ-ಮಲ್ಲಪ್ಪ, ತೃ- ವಿವೇಕಾನಂದ. ಬಾಲಕಿಯರು: ಪ್ರ-ನಂದಿನಿ ಜಿ., ದ್ವಿ-ರುಚಿತಾ, ತೃ-ಚೈತನ್ಯಾ, ಪ್ರೌಢಶಾಲೆ(ಬಾಲಕರು): ಪ್ರ-ಹನುಮೇಶ್, ದ್ವಿ-ಯತೀಶ್, ತೃ-ಪ್ರಣಮ್. ಬಾಲಕಿಯರು: ಪ್ರ-ಪ್ರತೀಕ್ಷಾ, ದ್ವಿ-ಪ್ರತಿಭಾ, ತೃ-ರೋಝ, ಕಾಲೇಜು ವಿಭಾಗ (ಬಾಲಕರು): ಪ್ರ-ರಾಜೇಂದ್ರ, ದ್ವಿ-ಚಿಂತನ್, ತೃ-ಕಿರಣ್. ಬಾಲಕಿಯರು: ಪ್ರ- ಪ್ರಜ್ಞಾ, ದ್ವಿ-ನಿರೀಕ್ಷಾ, ತೃ-ವೈಷ್ಣವಿ ಶೆಟ್ಟಿ.
5 ಕಿ.ಮೀ: 18-40ರ ಪುರುಷರು: ಪ್ರ- ಬಸವರಾಜ್ ನೀಲಪ್ಪ, ದ್ವಿ- ಬೆಳನಾಯಕ, ತೃ-ಧರೆಪ್ಪ ಬರವಣ್ಣಿ. ಮಹಿಳೆಯರು: ಪ್ರ- ಹರ್ಷಿತಾ, ದ್ವಿ- ದೀಕ್ಷಾ, ತೃ-ಚಿಕ್ಕಮ್ಮ. 41-55ರ ಪುರುಷರು: ಪ್ರ-ಶಾಜಿ ಎನ್.ಪಿ., ದ್ವಿ- ವಿನಯ ಕುಮಾರ್, ತೃ-ಮೇದಪ್ಪ, ಮಹಿಳೆಯರು: ಪ್ರ- ಹೇಮಲತಾ, ದ್ವಿ-ಲತಾ ಕುಮಾರಿ, ತೃ-ಡಾ.ಸಂಧ್ಯಾ. 56ವರ್ಷ ಮೇಲ್ಪಟ್ಟ ಪುರುಷರು: ಪ್ರ- ರಾಮಯ್ಯ, ದ್ವಿ-ರಾಮಕೃಷ್ಣ ಆರ್. 10ಕಿ.ಮೀ 18-40ರ ಪುರುಷರು: ಪ್ರ- ಚೈತ್ರಾ ದೇವಾಡಿಗ, ದ್ವಿ- ಪ್ರಿಯಾ ಎಲ್.ಡಿ., ತೃ-ತಿಪ್ಪವ್ವ, 18-40 ಮಹಿಳೆಯರು: ಪ್ರ-ಮಂಜುಳಾ, ದ್ವಿ- ಸುಶೀಲಾ, ತೃ- ಕಲ್ಪನಾ ಭಟ್, 56 ವರ್ಷ ಮೇಲ್ಪಟ್ಟ ಮಹಿಳೆಯರು - ಪ್ರ-ಅರುಣಕಲಾ ರಾವ್, ದ್ವಿ-ಲಲಿತಾ ನಾಯ್ಕಿ.

ಸಮಾರೋಪ ಸಮಾರಂಭ: ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ನಡೆದ ಸಮಾ ರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಫುಲ್ ಮ್ಯಾರಥಾನ್ ವಿಜೇತ ಪುರುಷ ಮತ್ತು ಮಹಿಳಾ ಅಥ್ಲೀಟ್‌ಗಳಿಗೆ ತಲಾ 50,000ರೂ.ನಗದು ಬಹುಮಾನವಿದೆ. ನಂತರದ ಸ್ಥಾನಿಗಳಿಗೆ ಕ್ರಮವಾಗಿ 40ಸಾವಿರ, 30ಸಾವಿರ ರೂ. ನಗದು ಬಹುಮಾನ ನೀಡಲಾಯಿತು. ಅದೇ ರೀತಿ ವಿವಿಧ ವಿಭಾಗಗಳಲ್ಲಿ ವಿಜೇತರಿಗೆ ಒಟ್ಟು 12.5ಲಕ್ಷ ರೂ. ನಗದು ಬಹುಮಾನ ವಿತರಿಸಲಾಯಿತು.

ಮಣಿಪಾಲ ಎಜ್ಯು ಬಿಲ್ಡಿಂಗ್ ಎದುರು ಮುಂಬಯಿ ಐಸಿಐಸಿಐ ಬ್ಯಾಂಕ್‌ನ ಮ್ಯಾನೇಜ್‌ಮೆಂಟ್ ಮುಖ್ಯಸ್ಥ ಗಿರೀಶ್ ಸೆಹಗಲ್ ಮ್ಯಾರಥಾನ್‌ಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಕುಲಪತಿ ಡಾ.ಎಚ್. ವಿನೋದ್ ಭಟ್, ಪ್ರೊವೈಸ್ ಚಾನ್ಸಲರ್ ಡಾ.ಪಿಎಲ್‌ಎನ್‌ಜಿ ರಾವ್, ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ಪ್ರಬಂಧಕ ರವೀಂದ್ರ ರೈ, ಅದಾನಿ ಯುಪಿಸಿಎಲ್‌ನ ಕಿಶೋರ್ ಆಳ್ವಾ, ಸಿಂಡಿಕೇಟ್ ಬ್ಯಾಂಕಿನ ಮಹಾಪ್ರಬಂಧಕ ಭಾಸ್ಕರ್ ಹಂದೆ, ಡಾ.ವಿನೋದ್ ನಾಯಕ್, ಡಾ.ಶೋಭಾ ಎಂ.ಇ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News