ಧನಾತ್ಮಕ ಚಿಂತನೆಯಿಂದ ಆರೋಗ್ಯದ ಮೇಲೆ ಸತ್ಪರಿಣಾಮ: ಬ್ರಹ್ಮಾಕುಮಾರಿ ಶಿವಾನಿ
ಮಂಗಳೂರು, ಫೆ.9: ಜೀವನದ ಪ್ರತಿಕ್ಷಣವೂ ಮನಸ್ಸ್ಸಿನಲ್ಲಿ ಧನಾತ್ಮಕ ಚಿಂತನೆಗಳನ್ನು ಅಳವಡಿಸುವುದರಿಂದ ದೇಹದ ಆರೋಗ್ಯದ ಮೇಲೂ ಉತ್ತಮ ಪರಿಣಾಮ ಬೀರುವುದನ್ನು ಸಾಧ್ಯವಾಗಬಹುದು. ಧನಾತ್ಮಕ ಚಿಂತನೆಗಳೇ ಯಶಸ್ಸಿನ ಗುಟ್ಟು ಎಂದು ಆಧ್ಯಾತ್ಮಿಕ ಮಾರ್ಗದರ್ಶಕಿ, ಪ್ರಶಿಕ್ಷಕಿ ಬ್ರಹ್ಮಾಕುಮಾರಿ ಶಿವಾನಿ ಹೇಳಿದರು.
ಮಂಗಳೂರಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ವತಿಯಿಂದ ಕೊಡಿಯಾಲ್‌ಬೈಲ್ ಟಿಎಂಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ರವಿವಾರ ‘ಆರೋಗ್ಯ - ಸಂತೋಷ ಮತ್ತು ಸಾಮರಸ್ಯ’ ವಿಷಯದಲ್ಲಿ ಆಧ್ಯಾತ್ಮಿಕ ಪ್ರವಚನ ನೀಡಿದರು.
ಮನುಷ್ಯ ಧನಾತ್ಮವಾಗಿದ್ದಷ್ಟು ಸಂತೋಷದ ಸೂಚ್ಯಾಂಕದಲ್ಲಿ ಏರಿಕೆ ಕಾಣಬಹುದು. ಅದೇ ರೀತಿ ಪ್ರತಿ ಋಣಾತ್ಮಕ ವಿಷಯಗಳಿಗೆ ಸೂಚ್ಯಾಂಕ ಇಳಿಯುತ್ತದೆ. ಟಿವಿ-ಮೊಬೈಲ್ ಮೊದಲಾದ ಋಣಾತ್ಮಕ ಪರಿಣಾಮ ಬೀರುವ ಮಾಧ್ಯವಮಗಳಿಗೆ ಸಾಧ್ಯವಾದಷ್ಟು ಕಡಿವಾಣ ಹಾಕುವುದು ಇಂದಿನ ಜೀವನ ಶೈಲಿಯಲ್ಲಿ ಅತೀ ಅವಶ್ಯವಾಗಿದೆ. ನಿದ್ದೆಯಿಂದ ಎದ್ದ ನಂತರ ಒಂದು ಗಂಟೆ ಮತ್ತು ನಿದ್ದೆ ಮಾಡುವ ಒಂದು ಗಂಟೆ ಮೊದಲು ಈ ಮಾಧ್ಯಮಗಳಿಂದ ದೂರವೇ ಇರಬೇಕು. ಆಹಾರ ಸೇವನೆ ಸಂದರ್ಭವೂ ಇವುಗಳಿಂದ ದೂರವಿರಬೇಕಾಗಿದೆ ಎಂದಿ ಶಿವಾನಿ ನುಡಿದರು.
ರಾಜಯೋಗಿನಿ ಬ್ರಹ್ಮಕುಮಾರಿ ನಿರ್ಮಲಾ ದೇವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬ್ರಹ್ಮಕುಮಾರಿ ರೇವತಿ ದೇವಿ ಪರಿಚಯಿಸಿದರು. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿವಿ ಸಂಚಾಲಕಿ ಬಿ.ಕೆ. ವಿಶ್ವೇಶ್ವರಿ ಕಾರ್ಯಕ್ರಮ ನಿರೂಪಿಸಿದರು.