ಉಳ್ಳಾಲ: ಫೆ.11ರಂದು ಉಚಿತ ಹಿಜಾಮಾ ಶಿಬಿರ, ಯುನಾನಿ ಚಿಕಿತ್ಸೆ
Update: 2020-02-09 22:43 IST
ಉಳ್ಳಾಲ, ಫೆ.9: ಆಯುಷ್ ಇಲಾಖೆ, ದ.ಕ. ಮತ್ತು ಉಳ್ಳಾಲದ ಹೆಲ್ಪ್ ಇಂಡಿಯಾ ಫೌಂಡೇಶನ್ ಜಂಟಿ ಆಶ್ರಯದಲ್ಲಿ 4ನೇ ರಾಷ್ಟ್ರೀಯ ಯುನಾನಿ ದಿನಾಚರಣೆಯ ಅಂಗವಾಗಿ ಫೆ.11ರಂದು ಉಳ್ಳಾಲದಲ್ಲಿ ಉಚಿತ ಹಿಜಾಮಾ ಚಿಕಿತ್ಸೆ, ತಜ್ಞ ವೈದ್ಯರಿಂದ ಉಚಿತ ಯುನಾನಿ ಚಿಕಿತ್ಸೆ ಹಾಗೂ ಔಷಧಿ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಉಳ್ಳಾಲದ ನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ನಡೆಯುವ ಶಿಬಿರದಲ್ಲಿ ಹಿಜಾಮಾ ಚಿಕಿತ್ಸೆಗೆ ಮಹಿಳೆಯರಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.
ಹಿಜಾಮಕ್ಕೆ ಮೊದಲ ನೂರು ಮಂದಿಗೆ ಮಾತ್ರ ಅವಕಾಶವಿದ್ದು, ಆಸಕ್ತರು ಫೆ.10ರೊಳಗೆ ಮೊ.ಸಂ. 9148950707ಕ್ಕೆ ಕರೆ ಮಾಡಿ ಹೆಸರು ನೋಂದಾಯಿಸಬೇಕು ಎಂದು ಪ್ರಕಟನೆ ತಿಳಿಸಿದೆ.