ಕಾರಿಂಜ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು
Update: 2020-02-09 22:57 IST
ಬಂಟ್ವಾಳ: ತಾಲೂಕಿನ ಪುಣ್ಯಕ್ಷೇತ್ರ ಕಾರಿಂಜದ ಕೆರೆಯಲ್ಲಿ ಸ್ನಾನಕ್ಕೆಂದು ಇಳಿದ ಯುವಕ ಮೃತಪಟ್ಟ ಘಟನೆ ರವಿವಾರ ನಡೆದಿದೆ.
ಸಿದ್ದಕಟ್ಟೆ ಸಮೀಪದ ವಕ್ಕಾಡಿಗೋಳಿ ನಿವಾಸಿ ಸೇಸಪ್ಪ ಮಡಿವಾಳ ಅವರ ಪುತ್ರ ಸುಕೇಶ್ (26) ಮೃತರು ಎಂದು ತಿಳಿದುಬಂದಿದೆ.
ಸುಕೇಶ್ ಮಂಗಳೂರಿನ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದು, ಇಂದು ರಜಾ ದಿನವಾದ್ದರಿಂದ ತನ್ನ ಇಬ್ಬರು ಸ್ನೇಹಿತರ ಜೊತೆ ಕಾರಿಂಜಕ್ಕೆ ಹೋಗಿದ್ದು, ಸಂಜೆಯ ವೇಳೆ ಕಾರಿಂಜದ ಕೆರೆಗೆ ಇಳಿದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸ್ ಠಾಣೆ ಎಸ್.ಐ. ಸೌಮ್ಯ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.