ಬೊಳ್ಳೂರು: 37ನೇ ವಾರ್ಷಿಕ ರಿಫಾಯ್ಯೀಯ ಧಪ್ಪ್ ರಾತೀಬ್

Update: 2020-02-09 17:36 GMT

ಬೊಳ್ಳೂರು: ಮುಹಿಯ್ಯುದ್ದೀನ್ ಜುಮಾ ಮಸೀದಿ ಇದರ ಅದೀನದಲ್ಲಿ ಕಾರ್ಯಚರಿಸುತ್ತಿರುವ ಲಿಯಾವುಲ್ ಇಸ್ಲಾಂ ಧಪ್ಪ್ ಕಮಿಟಿ ಬೊಳ್ಳೂರು ಇದರ 37ನೇ ವಾರ್ಷಿಕ ರಿಫಾಯ್ಯೀಯ ಧಪ್ಪ್ ರಾತೀಬ್ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮವು ಶನಿವಾರ ರಾತ್ರಿ ನಡೆಯಿತು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ಬೊಳ್ಳೂರು ಮಸೀದಿ ಖತೀಬ್ ಅಲ್ ಹಾಜ್ ಮುಹಮ್ಮದ್ ಅಝ್ಹರ್ ಫೈಝಿ ವಹಿಸಿದ್ದರು. ಅಲ್ ಹಾಜ್ ತ್ವಾಖ ಅಹ್ಮದ್ ಮಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿದರು. ಎಸ್.ಕೆ.ಎಸ್.ಎಸ್.ಎಫ್ ರಾಜ್ಯಾದ್ಯಕ್ಷ ಅನೀಸ್ ಕೌಸರಿ ಮುಖ್ಯ ಪ್ರಭಾಷಣ ನಡೆಸಿದರು. ಕೇರಳದ ನಜ್ಮುದ್ದೀನ್ ಪುಕೋಯ ತಂಙಳ್ ದುಆ ಆಶಿರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಎಸ್.ಡಿ.ಪಿ.ಐ ಪ್ರಧಾನ ಕಾರ್ಯದರ್ಶಿಇಕ್ಬಾಲ್ ಬೆಳ್ಳಾರೆ, ಗ್ರಾಮ ಪಂಚಾಯತ್ ಸದಸ್ಯರಾದ ಎಚ್.ವಸಂತ್ ಬೆರ್ನಾಡ್ ಹಾಗೂ ಎಮ್ ಅಬ್ದುಲ್ ಖಾದರ್, ಬೊಳ್ಳೂರು ಮಸೀದಿ ಅದ್ಯಕ್ಷ ಬಿ.ಎಮ್ ಇಬ್ರಾಹಿಂ, ಅಬ್ದುಲ್ ರಹಿಮಾನ್ ಪೈಝಿ, ಹಾಜಿ ಅಬ್ದುಲ್ ಖಾದರ್ ಮದನಿ ಪಕ್ಷಿಕೆರೆ, ಅಬ್ದುಲ್ಲಾ ಮದನಿ ಸಾಗ್, ಹನೀಪ್ ದಾರಿಮಿ ಇಂದಿರಾನಗರ, ಅಲ್ ಹಾಜ್ ಇಸ್ಮಾಯಿಲ್ ಮುಸ್ಲಿಯಾರ್, ಕೆ.ಎಚ್ ಹಸನ್ ಮುಸ್ಲಿಯಾರ್, ಅಬೂಬಕ್ಕರ್ ಮದನಿ, ಹಾಜಿ ಪಂಡಿತ್ ಬಿ.ಎ ಇದ್ದಿನಬ್ಬ ತೋಡಾರ್, ಶಾಹುಲ್ ಹಮೀದ್ ಕದಿಕೆ, ಹಾಜಿ ಬಿ.ಎಚ್ ಅಬ್ದುಲ್ ಖಾದರ್, ಹಾಜಿ ಮಹಮ್ಮದ್ ನೂರಾನಿಯ ಪಕ್ಷಿಕೆರೆ, ಇಬ್ರಾಹಿಂ ಉಮರ್ ದುಬೈ, ಹಾಜಿ ಅಬ್ದುಲ್ ರಝಾಕ್, ಹಾಜಿ ಐ.ಎ.ಕೆ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಧಪ್ ಸಮಿತಿ ಅಧ್ಯಕ್ಷ ಅಝೀಝ್ ಐ.ಎ.ಕೆ, ಉಪಾಧ್ಯಕ್ಷ ಯುಸೂಪ್ ಪದ್ಮನೂರು, ಕಾರ್ಯದರ್ಶಿ ಉಮರ್ ಪಾರೂಕ್, ಜೊತೆ ಕಾರ್ಯದರ್ಶಿ ಆಶಿಕ್ ಇಂದಿರಾನಗರ ಸೇರಿ ಮತ್ತಿತರು ಉಪಸ್ಥಿತರಿದ್ದರು. ಬೊಳ್ಳೂರು ಸದರ್ ಮುಹಲ್ಲಿಂ ನಾಸಿರ್ ಮುಸ್ಲಿಯಾರ್ ಸ್ವಾಗತಿಸಿದರು, ಬಿ.ಎಂ ಮೈದಿನ್ ಬೊಳ್ಳೂರು ಹಾಗೂ ತ್ವಯ್ಯಿಬ್ ಫೈಝಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News