ಬ್ಯಾಡ್ಮಿಂಟನ್ ಕೋಚ್ ಗೋಪಿಚಂದ್‌ಗೆ ಐಒಸಿಯ ಜೀವಮಾನ ಸಾಧನೆ ಪ್ರಶಸ್ತಿ

Update: 2020-02-09 18:52 GMT

ಹೊಸದಿಲ್ಲಿ, ಫೆ.9: ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೆಲ ಗೋಪಿಚಂದ್‌ರನ್ನು ದೇಶದ ಕ್ರೀಡೆಯ ಅಭಿವೃದ್ಧಿಯಲ್ಲಿ ವಹಿಸಿದ ಪಾತ್ರವನ್ನು ಗುರುತಿಸಿ ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) 2019ನೇ ಸಾಲಿನ ಪ್ರತಿಷ್ಠಿತ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಐಒಸಿ ಕೋಚ್‌ಗಳಿಗೆ ನೀಡುವ ಪ್ರತಿಷ್ಠಿತ ಪ್ರಶಸ್ತಿಗೆ ಪುರುಷರ ವಿಭಾಗದಲ್ಲಿ 2019 ರ ಐಒಸಿ ಕೋಚ್ ಜೀವಮಾನ ಸಾಧನೆ ಪ್ರಶಸ್ತಿಗೆ ಪುಲ್ಲೆಲ ಗೋಪಿಚಂದ್ ಅವರನ್ನು ಆಯ್ಕೆ ಮಾಡಿರುವುದಾಗಿ ಐಒಸಿ ಅಥ್ಲೀಟ್ ಮತ್ತು ಎಂಟೂರೇಜ್ ಆಯೋಗ ಪ್ರಕಟನೆಯಲ್ಲಿ ತಿಳಿಸಿವೆ. ಭಾರತದಲ್ಲಿ ಬ್ಯಾಡ್ಮಿಂಟನ್ ಅಭಿವೃದ್ಧಿಯಲ್ಲಿ ಗೋಪಿಚಂದ್ ಕೊಡುಗೆ, ಕ್ರೀಡೆಗಳಲ್ಲಿ ಕ್ರೀಡಾಪಟುಗಳನ್ನು ಬೆಂಬಲಿಸುವಲ್ಲಿ ಅವರು ಮಾಡಿದ ಪ್ರಯತ್ನಗಳು ಮತ್ತು ಒಲಿಂಪಿಕ್ಸ್‌ಗೆ ಅವರು ನೀಡಿದ ಕೊಡುಗೆಗಳನ್ನು ಗುರುತಿಸಿ ಪ್ರಶಸ್ತಿ ನೀಡಲು ಸಮಿತಿ ಬಯಸಿದೆ ಎಂದು ಪ್ರಕಟನೆೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News