ಆಸ್ಕರ್ ಪ್ರಶಸ್ತಿ ಪ್ರಕಟ: ವೋಕಿನ್ ಫಿನಿಕ್ಸ್ ಅತ್ಯುತ್ತಮ ನಟ , ರೆನೀ ಝೆಲ್ವೆಗರ್ ಅತ್ಯುತ್ತಮ ನಟಿ

Update: 2020-02-10 05:35 GMT

ಲಾಸ್ ಏಂಜಲೀಸ್ , ಫೆ.10:   ಆಸ್ಕರ್ ಪ್ರಶಸ್ತಿ ಪ್ರಕಟಗೊಂಡಿದ್ದು,  ಜೋಕರ್  ಚಿತ್ರದ ವೋಕಿನ್ ಫಿನಿಕ್ಸ್ ಅತ್ಯುತ್ತಮ ನಟ ಮತ್ತು ಜೂಡಿ ಚಿತ್ರದ   ರೆನೀ ಝೆಲ್ವೆಗರ್  ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

ಅತ್ಯುತ್ತಮ ಚಿತ್ರಕಥೆ ವಿಭಾಗದಲ್ಲಿ ದಕ್ಷಿಣ ಕೊರಿಯಾದ ಬಾಂಗ್ ಜೂನ್-ಹೋ  ನಿರ್ದೇಶನದ ಪಾರಾಸೈಟ್  ಗೆ ಪ್ರಶಸ್ತಿ ಲಭಿಸಿದೆ. ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್‌ನಲ್ಲಿ ಅಭಿನಯಕ್ಕಾಗಿ ಬ್ರಾಡ್ ಪಿಟ್  ಗೆ  ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದೊರಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News